ಮನೋರಂಜನೆ

ಮನಸ್ಸಿನಲ್ಲಿ ಇದ್ದುದನ್ನು ಅಫ್ರಿದಿ ಹೇಳಿದ್ದು, ವಿವಾದ ಅಗತ್ಯವಿಲ್ಲ: ಅಫ್ರಿದಿಗೆ ಬೆಂಬಲಕ್ಕೆ ನಿಂತ ವಕಾರ್ ಯೂನಿಸ್

Pinterest LinkedIn Tumblr

Pakistani captain Shahid Afridi (L) and coach Waqar Younis address a press conference during a training session at the Beausejour Cricket Ground in Gros Islet, St Lucia, April 20, 2011. The West Indies and Pakistan will play one Twenty 20 match, five ODIs and two test starting April 21, 2011. AFP PHOTO/Emmanuel Dunand (Photo credit should read EMMANUEL DUNAND/AFP/Getty Images)

ನವದೆಹಲಿ: ಅತ್ತ ಪಾಕಿಸ್ತಾನದಲ್ಲಿ ಶಾಹಿದ್ ಅಫ್ರಿದಿ ಭಾರತ ಪ್ರೀತಿ ಹೇಳಿಕೆ ವಿವಾದ ಹುಟ್ಟುಹಾಕುತ್ತಲೇ ಇತ್ತ ಭಾರತದಲ್ಲಿರುವ ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ವಕಾರ್ ಯೂನಿಸ್ ಅಫ್ರಿದಿ ಬೆಂಬಲಕ್ಕೆ ನಿಂತಿದ್ದಾರೆ.

ಭಾರತದಲ್ಲೇ ಹೆಚ್ಚಿನ ಪ್ರೀತಿ ಸಿಗುತ್ತದೆ’ ಎನ್ನುವ ಹೇಳಿಕೆ ತವರಿನಿಂದ ಟೀಕೆ ಎದುರಿಸುತ್ತಿರುವ ಪಾಕಿಸ್ತಾನ ತಂಡದ ನಾಯಕ ಶಾಹಿದ್ ಅಫ್ರಿದಿಗೆ ಕೋಚ್ ವಕಾರ್ ಯೂನಿಸ್ ಬೆಂಬಲ ನೀಡಿದ್ದು, ಅಫ್ರಿದಿ ಹೇಳಿದ ಹೇಳಿಕೆಯಲ್ಲಿ ಯಾವುದೇ ವಿವಾದಾತ್ಮಕ ಅಂಶವಿಲ್ಲ. ತಮ್ಮ ಮನಸ್ಸಿನಲ್ಲಿ ಇದ್ದುದನ್ನು ಅವರು ನೇರವಾಗಿ ಹೇಳಿದ್ದಾರೆ ಅಷ್ಟೇ ಎಂದು ವಕಾರ್ ತಿಳಿಸಿದ್ದಾರೆ.

ಈ ಪ್ರಕರಣದ ಬಗ್ಗೆ ತಾವು ಅಫ್ರಿದಿಯವರೊಂದಿಗೆ ಮಾತನಾಡಿದ್ದು, ಅಫ್ರಿದಿ ತಾವು ಸಕಾರಾತ್ಮಕ ವಿಚಾರವನ್ನು ಹೇಳಲು ಮಾತ್ರ ಬಯಸಿದ್ದಾಗಿ ವಕಾರ್ ವಿವರಿಸಿದ್ದಾರೆ. ‘ನನ್ನ ಪ್ರಕಾರ ಅಫ್ರಿದಿ ಅವರ ಆ ಮಾತಿನಲ್ಲಿ ಯಾವುದೇ ವಿವಾದಿತ ಅಂಶವಿಲ್ಲ. ಅದು ಅವರ ಭಾವನೆ. ಇದನ್ನು ಹಿಡಿದುಕೊಂಡು ವಿವಾದ ಮಾಡುವ ಬದಲು ಇಲ್ಲಿಯೇ ಬಿಟ್ಟುಬಿಡಬೇಕು. ಕ್ರಿಕೆಟ್ ಆಟದ ಮೂಲಕ ಎದುರಾಳಿಯನ್ನು ಸೋಲಿಸಲು ಬಂದಿದ್ದೇವೆ. ಹಾಗಾಗಿ ಕ್ರಿಕೆಟ್ ಬಗ್ಗೆ ಗಮನ ವಹಿಸಿದರೆ ಒಳ್ಳೆಯದು’ ಎಂದು ಪಂದ್ಯಪೂರ್ವ ಸುದ್ದಿಗೋಷ್ಠಿಯಲ್ಲಿ ವಕಾರ್ ಹೇಳಿದರು.

ಅಂತೆಯೇ ವಿವಾದವನ್ನು ಪಕ್ಕಕ್ಕಿಟ್ಟು ಗುಣಮಟ್ಟದ ಕ್ರಿಕೆಟ್ ಆಡುವತ್ತ ಗಮನವಹಿಸಿ ಎಂದು ಪಾಕಿಸ್ತಾನ ಆಟಗಾರರಿಗೆ ಹೇಳಿದ್ದೇನೆ ಎಂದು ವಕಾರ್ ತಿಳಿಸಿದ್ದಾರೆ.

Write A Comment