ರಾಷ್ಟ್ರೀಯ

ಓವೈಸಿ ನಾಲಿಗೆ ಕತ್ತರಿಸಿದವರಿಗೆ ರು.21 ಸಾವಿರ ಬಹುಮಾನ; ಉತ್ತರಪ್ರದೇಶದ ವಿದ್ಯಾರ್ಥಿ ಸಂಘದ ನಾಯಕನಿಂದ ಘೋಷಣೆ

Pinterest LinkedIn Tumblr

Asaduddin Owaisi

ಲಖನೌ: ‘ಭಾರತ್ ಮಾತಾ ಕಿ ಜೈ’ ಎಂದು ಕೂಗುವುದಿಲ್ಲ ಎಂದಿದ್ದ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿಯವರ ನಾಲಿಗೆ ಕತ್ತರಿಸಿದವರಿಗೆ ರು.21 ಸಾವಿರ ಬಹುಮಾನ ನೀಡುವುದಾಗಿ ಉತ್ತರಪ್ರದೇಶದ ವಿದ್ಯಾರ್ಥಿ ಸಂಘದ ನಾಯಕನೊಬ್ಬ ಘೋಷಣೆ ಮಾಡಿದ್ದಾನೆ.

ಓವೈಸಿಯವರ ಹೇಳಿಕೆ ವಿರುದ್ಧ ಕಿಡಿಕಾರಿರಿರುವ ಮೀರುತ್ ಕಾಲೇಜಿನ ಮಾಜಿ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ದುಷ್ಯಂತ್ ತೋಮರ್ ಘೋಷಣೆ ಮಾಡಿದ ವ್ಯಕ್ತಿಯಾಗಿದ್ದಾನೆ.

ಓವೈಸಿಯವರ ಈ ಹೇಳಿಕೆ ಬರೀ ದೇಶ ವಿರೋಧಿ ಎಂಬುದನ್ನಷ್ಟೇ ತೋರಿಸುತ್ತಿಲ್ಲ, ಅವರು ದೇಶಭಕ್ತರಲ್ಲ ಎಂಬುದು ಕೂಡ ಇದರಲ್ಲಿ ತಿಳಿದುಬರುತ್ತಿದೆ. ಹೀಗಾಗಿ ತೋಮರ್ ಅವರನ್ನು ಲೋಕಸಭಾ ಸದಸ್ಯತ್ವ ಸ್ಥಾನದಿಂದ ತೆಗೆದುಹಾಕಬೇಕೆಂದು ಆಗ್ರಹಿಸಿದ್ದಾರೆ.

ದುಷ್ಯಂತ್ ತೋಮರ್ 2014-15ರ ಮೀರುತ್ ಕಾಲೇಜಿನಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೆ, ಬಿಜೆಪಿಗೆ ಬೆಂಬಲಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಲ್ಲಿ ರಾಜ್ಯ ಕಾರ್ಯನಿರ್ವಾಹಕರಾಗಿ ಕಾರ್ಯನಿರ್ವಹಿಸಿದ್ದರು.

ಈ ಹಿಂದೆ ಜೆಎನ್ ಯು ಪ್ರಕರಣಕ್ಕೆ ಸಂಬಂಧಿಸಿ ಆರ್ ಎಸ್ಎಸ್ ಸಭೆಯಲ್ಲಿ ಮಾತನಾಡಿದ್ದ ಮೋಹನ್ ಭಾಗವತ್ ಅವರು, ಜೆಎನ್ ಯು ಆವರಣದಲ್ಲಿ ದೇಶ ವಿರೋಧಿ ಘೋಷಣೆಗಳು ಕೇಳಿಬಂದಿವೆ. ಪ್ರತಿಯೊಬ್ಬರೂ ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗವಂತಾಗಬೇಕು. ಯುವಜನಾಂಗದ ಸರ್ವತೋಮುಖ ಅಭಿವೃದ್ಧಿಗೆ ಇದು ಪೂರಕವಾಗಬೇಕೆಂದು ಹೇಳಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಓವೈಸಿ, ನನ್ನ ಕುತ್ತಿಗೆ ಮೇಲೆ ಚೂರಿ ಇಟ್ಟರೂ ನಾನು ಭಾರತ್ ಮಾತಾ ಕಿ ಜೈ ಎಂದು ಹೇಳುವುದಿಲ್ಲ. ಘೋಷಣೆಯನ್ನು ಕೂಗಿ, ದೇಶಭಕ್ತಿ ಸಾಬೀತುಪಡಿಸಬೇಕೆಂದು ಸಂವಿಧಾನದಲ್ಲಿ ಎಲ್ಲೂ ಹೇಳಿಲ್ಲ. ಹಾಗಾಗಿ ಕಾನೂನು ಉಲ್ಲಂಘನೆಯ ಪ್ರಶ್ನೆ ಇಲ್ಲಿ ಹುಟ್ಟುವುದಿಲ್ಲ. ಈ ನಿಲುವಿಗೆ ನಾನು ಬದ್ಧನಾಗಿದ್ದೇನೆ ಯಾವುದೇ ಕಾರಣಕ್ಕೂ ಘೋಷಣೆ ಕೂಗುವುದಿಲ್ಲ.

ನಾನು ಈ ದೇಶದ ಸಂವಿಧಾನವನ್ನು ಪಾಲಿಸುತ್ತೇನೆ. ಆದರೆ, ಘೋಷಣೆ ಕೂಗುವಂತೆ ಯಾರಿಗೂ ಒತ್ತಾಯ ಮಾಡುವುದಿಲ್ಲ. ಆರ್ ಎಸಎಸ್ ತಮ್ಮ ಸಿದ್ಧಾಂತವನ್ನು ಜನರ ಮೇಲೆ ಹೇರಲು ಯತ್ನಿಸುತ್ತಿದೆ. ಈ ವಿಚಾರವಾಗಿ ಚರ್ಚೆ ನಡೆಸಲು ನಾನು ಸಿದ್ಧನಿದ್ದೇನೆ. ನಾನಂತೂ ಘೋಷಣೆ ಕೂಗುವುದಿಲ್ಲ ಈಗ ಏನು ಮಾಡುತ್ತೀರಿ ಭಾಗವತ್ ಸಾಬ್ ಎಂದು ಓವೈಸಿ ಪ್ರಶ್ನಿಸಿದ್ದರು.

Write A Comment