ರಾಷ್ಟ್ರೀಯ

ಜೆಎನ್ ಯು: ಪ್ರಚೋದನಕಾರಿ ಘೋಷಣೆ ಕೂಗಿದ್ದು ಹೊರಗಿನವರು; ತನಿಖಾ ಸಮಿತಿ

Pinterest LinkedIn Tumblr

New Delhi: JNU students welcome JNUSU President Kanhaiya Kumar after he reached at the campus upon his release on bail, in New Delhi on Thursday. PTI Photo by Kamal Singh(PTI3_3_2016_000235B)

ನವದೆಹಲಿ: ದೇಶದಾದ್ಯಂತ ತೀವ್ರ ವಿವಾದವನ್ನು ಸೃಷ್ಟಿಸಿದ್ದ ಜೆಎನ್ ಯು ಪ್ರಕರಣಕ್ಕೆ ಸಂಬಂಧಿಸಿದ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರಚೋದನಕಾರಿ ಘೋಷಣೆ ಕೂಗಿದ್ದು ಹೊರಗಿನವರು ಎಂದು ಉನ್ನತ ಮಟ್ಟದ ತನಿಖಾ ಸಮಿತಿ ಮಾಹಿತಿ ನೀಡಿದೆ.

ಜೆಎನ್ ಯು ವಿವಾದಕ್ಕೆ ಸಂಬಂಧಿಸಿ ವಿಶ್ವವಿದ್ಯಾಲಯವು ಈ ಹಿಂದೆ ಉನ್ನತ ಮಟ್ಟದ ಆಂತರಿಕ ಸಮಿತಿಯನ್ನು ರಚಿಸಿತ್ತು. ಸಮಿತಿಯು ನಿನ್ನೆಯಷ್ಟೇ ತನ್ನ ತನಿಖೆಯ ವರದಿಯನ್ನು ವಿವಿಗೆ ಸಲ್ಲಿಸಿತ್ತು.

ಸಮತಿಯ ಸಲ್ಲಿಸಿರುವ ವರದಿಯಲ್ಲಿ ಫೆ.9ರಂದು ವಿವಿ ಆವರಣದಲ್ಲಿ ಕೇಳಿಬಂದ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ್ದವರು ಹೊರಗಿನವರಾಗಿದ್ದು, ಇಂತರ ಘಟನೆ ನಡೆಯಲು ವಿದ್ಯಾರ್ಥಿಗಳೇ ಅನುವು ಮಾಡಿಕೊಟ್ಟಿರುವುದು ದುರದೃಷ್ಟಕರ ಎಂದು ಹೇಳಿಕೊಂಡಿದೆ.

ಇನ್ನು ವಿವಿಯ ಭದ್ರತೆಯಲ್ಲೂ ಲೋಪ ಕಂಡುಬಂದಿದ್ದು, ಹೊರಗಿನಿಂದ ಜನರು ವಿವಿ ಆವರಣಕ್ಕೆ ಬಂದು ಘೋಷಣೆ ಕೂಗುತ್ತಿದ್ದರೂ ಭದ್ರತಾ ಸಿಬ್ಬಂದಿ ಅವರನ್ನು ತಡೆಯುವ ಯತ್ನವನ್ನು ಮಾಡಿಲ್ಲ. ಅವರನ್ನು ಹೊರ ಕಳುಹಿಸಲು ಯತ್ನ ನಡೆಸಿಲ್ಲ ಎಂದು ಹೇಳಿದೆ.

ವಿವಿಯ ಪದಾಧಿಕಾರಿಗಳಾದವರೂ ವಿದ್ಯಾರ್ಥಿಗಳ ಕುರಿತಂತೆ ಎಚ್ಚರಿಕೆ ಹಾಗೂ ಸಂಯಮದಿಂದ ವರ್ತಿಸಬೇಕು. ಆದರೆ, ಅವರೂ ಕೂಡ ಬೇಜವಾಬ್ದಾರಿತನವನ್ನು ತೋರಿದ್ದಾರೆ.

ಕಾರ್ಯಕ್ರಮವನ್ನು ವಿವಿ ತಿರಸ್ಕರಿಸಿದ್ದರೂ ವಿದ್ಯಾರ್ಥಿಗಳು ಬೇಕೆಂದೇ ಪ್ರತಿಭಟನೆ ನಡೆಸಿದ್ದಾರೆ. ಇದನ್ನೇ ದುರ್ಬಳಕೆ ಮಾಡಿಕೊಂಡಿರುವ ಹೊರಗಿನವರು ವಿವಿ ಆವರಣಕ್ಕೆ ಬಂದು ಘೋಷಣೆಗಳನ್ನು ಕೂಗಿದ್ದಾರೆಂದು ಹೇಳಿಕೊಂಡಿದೆ.

ತನಿಖಾ ಸಮತಿ ತನಿಖೆ ಹಾಗೂ ಶಿಫಾರಸ್ಸು ಎಂದು ಎರಡು ರೀತಿಯ ವಿಭಾಗ ಮಾಡಿಕೊಂಡು ತನಿಖೆ ನಡೆಸಿದೆ. ತನಿಖಾ ಸಮಿತಿ ಈಗಾಗಲೇ ತನ್ನ ವರದಿಯನ್ನು ಸಲ್ಲಿಸಿದ್ದು, ವರದಿಯಲ್ಲಿ 21 ವಿದ್ಯಾರ್ಥಿಗಳು ತಪ್ಪಿತಸ್ಥರೆಂದು ಹೇಳಿದೆ. ಇದರಂತೆ ಕ್ರಮಕೈಗೊಂಡಿದ್ದ ವಿವಿಯು ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಐವರಿಗೆ ತಾತ್ಕಾಲಿಕವಾಗಿ ನಿಷೇಧ ಹೇರಿತ್ತು.

Write A Comment