ರಾಷ್ಟ್ರೀಯ

ದೇಶೀ ನಿರ್ಮಿತ ಅಗ್ನಿ-1 ಕ್ಷಿಪಣಿ ಯಶಸ್ವಿ ಉಡಾವಣೆ

Pinterest LinkedIn Tumblr

aಬಾಲಸೂರ್(ಒರಿಸ್ಸಾ),ಮಾ.14-ಸುಮಾರು 700  ಮೀಟರ್‌ಗೂ  ದೂರದ ಗುರಿಗೆ ಅಪ್ಪಳಿಸುವ ಸಾಮರ್ಥ್ದ ಮಧ್ಯಮ ವ್ಯಾಪ್ತಯ ಸ್ವದೇಶಿ ನಿರ್ಮಿತ ಅಗ್ನಿ-1 ಖಂಡಾಂತರ ಕ್ಷಿಪಣಿಯನ್ನು ಇಂದು ಒರಿಸ್ಸಾ ಕಡಲ ತೀರದಲ್ಲಿ ನಡೆಸಿದ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಯಿತು ಎಂದು ರಕ್ಷಣಾ ಖಾತೆ ಅಧಿಕಾರಿಗಳು ತಿಳಿಸಿದ್ದಾರೆ. ಇಲ್ಲಿನ ಅಬ್ದುಲ್ ಕಲಾಂ ಐಲ್ಯಾಂಡ್(ವೀಲರ್ ಐಲ್ಯಾಂಡ್)ನ ಸಂಚಾರಿ ಉಡಾವಣಾ ವಾಹನದಿಂದ ಇಂದು ಬೆಳಗ್ಗೆ 9.15ಕ್ಕೆ ಸರಿಯಾಗಿ, ಭೂಮಿಯಿಂದ ಭೂಮಿಗೆ ಅಪ್ಪಳಿಸುವ ಒಂದೇ ಹಂತದಲ್ಲಿ ಸ್ಪೋಟಿಸವ ಅಗ್ನಿ-1 ಕ್ಷಿಪಣಿಯನ್ನು ವಿಜ್ಞಾನಿಗಳು ಯಶಸ್ವಿಯಾಗಿ ಉಡಾಯಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ದೇಶೀ ನಿರ್ಮಿತ ಕ್ಷಿಪಣಿ 9 ನಿಮಿಷ 36 ಸೆಕೆಂಡ್‌ಗಳಲ್ಲಿ 700 ಕಿ.ಮೀ ಕ್ರಮಿಸಿ ಅಪ್ಪಳಿಸಬಲ್ಲದು. ಅಗ್ನಿ ಕ್ಷಿಪಣಿ 12 ಟನ್ ತೂಕವಿದ್ದು, 15 ಮೀಟರ್ ಉದ್ದವಿದೆ. ಸುಮಾರು 1 ಟನ್‌ಗೂ ಹೆಚ್ಚು ತೂಕದ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ. 2015ರ ನವೆಂಬರ್ 27ರಂದು ಅಗ್ನಿ-1 ಕ್ಷಿಪಣಿ ಪರೀಕ್ಷೆ ನಡೆಸಲಾಗಿತ್ತು ಎಂದು ಡಿಆರ್‌ಡಿಒ ಅಧಿಕಾರಿಗಳು ತಿಳಿಸಿದ್ದಾರೆ.

Write A Comment