ಮನೋರಂಜನೆ

ಮುಖಕ್ಕೆ ಮುಸುಕು ಮುಚ್ಚಿಕೊಂಡು ದೆಹಲಿ ರಸ್ತೆಗಳಲ್ಲಿ ಅಲೆದ ಅಮಿತಾಬ್ ಬಚ್ಚನ್ !

Pinterest LinkedIn Tumblr

abachan

ನವದೆಹಲಿ: ಅಭಿಮಾನಿಗಳ ಮುತ್ತಿಗೆಯಿಂದ ಪಾರಾಗಲು ಬಿಗ್ ಬಿ ಅಮಿತಾಭ್‌ ಬಚ್ಚನ್ ರಾಷ್ಟ್ರ ರಾಜಧಾನಿಯಲ್ಲಿ ಹೊಸ ಸಾಹಸ ಮಾಡಿದ್ದಾರೆ. ಮುಖವನ್ನು ಮುಚ್ಚಿಕೊಂಡು ದೆಹಲಿಯ ಗಲ್ಲಿಗಲ್ಲಿಗಳಲ್ಲಿ ಸಾಮಾನ್ಯ ಜನರಂತೆ ತಿರುಗಾಡಿದ್ದಾರೆ.

ww

602bf2772c769f319e9e4f238c7f119ac3d25e47-tc-img-preview

111

ಅಬ್ಬೇಪಾರಿಯಂತೆ ಓಡಾಡುತ್ತಿದ್ದ ಬಿಗ್‌ಬಿಯನ್ನು ಯಾರೊಬ್ಬರೂ ಗುರುತು ಹಿಡಿಯಲಿಲ್ಲ. ಸ್ವತಃ ಅಮಿತಾಭ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಈ ಟ್ರಿಕ್ಸ್‌ಗಳೆಲ್ಲಾ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗಷ್ಟೇ ಸೀಮಿತ ಎಂದುಕೊಂಡಿದ್ದ ಅವರ ಅಭಿಮಾನಿಗಳು ಅಮಿತಾಭ್ ಅವರ ಈ ನಡೆ ಬಗ್ಗೆ ಬೆರಗಾಗಿದ್ದಾರೆ.

ಖಾಕಿ ಪ್ಯಾಂಟ್, ಫಿಟ್ಟೆಡ್ ಶರ್ಟ್ ಹಾಗೂ ಒಂದು ಮುಸುಕು ಧರಿಸಿ ಬೆಳ್ಳಂಬೆಳಗ್ಗೆ ದೆಹಲಿಯ ಜನಭರಿತ ರಸ್ತೆಗಳಲ್ಲಿ ತಿರುಗಾಡಿದ ಅಮಿತಾಭ್ ಅವರು ಈ ಚಿತ್ರಗಳನ್ನು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಶೂಜಿತ್ ಸರ್ಕಾರ್ ಅವರು ನಿರ್ದೇಶಿಸುತ್ತಿರುವ ಹೊಸ ಚಿತ್ರದ ಪಿಂಕ್ ಸಿನಿಮಾ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲು ರಾಜಧಾನಿಗೆ ಬಂದಿದ್ದ ಅಮಿತಾಭ್ ಮುಖಕ್ಕೆ ಮುಸುಕು ಹಾಕಿಕೊಂಡು ಬೀದಿ ಬೀದಿಗಳಲ್ಲಿ ಸುತ್ತಿದ್ದಾರೆ.

Write A Comment