
ಲಕ್ನೋ: ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯ ಪವಾರಾ ಎಂಬ ಹಳ್ಳಿಯಲ್ಲಿ ನಡೆದ ಈ ವಿಶಿಷ್ಟ ಮದುವೆಗೆ 5 ಸಾವಿರಕ್ಕೂ ಹೆಚ್ಚು ಜನ ಜಮಾಯಿಸಿದ್ದರು. ಭಾರೀ ವಿಜೃಂಭಣೆಯ ಈ ಅದ್ಧೂರಿ ಮದುವೆಯಲ್ಲಿ ಭಾರತೀಯ ಊಟ-ತಿಂಡಿಗಳ ವ್ಯವಸ್ಥೆಯೂ ಜಬರದಸ್ತಾಗೇ ಇತ್ತು. ಹಿನ್ನೆಲೆಯಲ್ಲಿ ತೇಲಿ ಬರುತ್ತಿದ್ದ ಮೃದು ಮಧುರವಾದ ಡಿಜೆ ಹಾಡಿಗೆ ಜನ ಹುಚ್ಚೆದ್ದು ಕುಣಿದರು.ಈ ಅಪರೂಪದ ಮದುವೆಯಲ್ಲಿ ವಧು-ವರ ಯಾರುಗೊತ್ತೆ….? ವರ ಶಗೂನ್ ಎಂಬ ಗಂಡು ನಾಯಿ,
ಇದರ ಮಾಲೀಕ ಬಸಂತ್ ತ್ರಿಪಾಠಿ. ಇನ್ನು ವಧು ಹೆಸರು ಶಗುನಿಯಾ ಹೆಣ್ಣಿನ ಒಡೆಯ ಜಂಗ್ಬಹಾದೂರ್.
ಭಾರತೀಯ ಸಂಪ್ರದಾಯದಂತೆ ಎಲ್ಲಾ ವಿಧಿ-ವಿಧಾನಗಳು, ಮಂತ್ರ ಘೋಷಣೆಗಳೊಂದಿಗೆ ವಿಧ್ಯುಕ್ತ ಮದುವೆ ನಡೆಯಿತು. ಸೇರಿದ್ದ 5 ಸಾವಿರಕ್ಕೂ ಹೆಚ್ಚು ಜನ ರುಚಿರುಚಿಯಾದ ಭೂರಿ ಭೋಜನ ಸವಿದು ವಧು-ವರರನ್ನು ಹರಿಸಿದರು. ನಂತರ ವಧು ಕಾರಿನಲ್ಲಿ ವರ ಶುಗುನ ಜತೆ ತೆರಳಿದಾಗ ಅದರ ಮಾಲೀಕ ಬಸಂತ್ ತ್ರಿಪಾಠಿ ಮತ್ತು ಪತ್ನಿ ಹಾಗೂ ಕುಟುಂಬದವರು ಅಳುತ್ತಲೇ ಟಾಟಾ ಹೇಳಿದರು. ವರ ಶಗುನಾಯ್ ಮಾತ್ರ ಪ್ರಪಂಚವನ್ನೇ ಗೆದ್ದ ಗತ್ತಿನಲ್ಲಿ ತನ್ನ ಪತ್ನಿ ಯೊಂದಿಗೆ ಕಾರಿನಲ್ಲಿ ತೆರಳಿದ.’