ರಾಷ್ಟ್ರೀಯ

ಬಿಜೆಪಿ ಸರ್ಕಾರದ ಆಯುಷ್ ಖಾತೆಗೆ ಮುಸ್ಲಿಮರ ನೇಮಕಾತಿ ಇಲ್ಲವಂತೆ..!

Pinterest LinkedIn Tumblr

ayush

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರದ ಆಯುಷ್ ಸಚಿವಾಲಯ ಯಾವುದೇ ಕಾರಣಕ್ಕೂ ಇಲಾಖೆಗೆ ಮುಸಲ್ಮಾನರನ್ನು ಸೇರಿಸಿಕೊಳ್ಳುವುದಿಲ್ಲ ಎಂಬ ನೀತಿಯನ್ನು ಮಾಡಿರುವುದು ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ಮುಖಾಂತರ ದೊರೆತಿರುವುದಾಗಿ ಅಧಿಕೃತ ವರದಿಯೊಂದು ತಿಳಿಸಿದೆ. ಮೋದಿ ಸರ್ಕಾರ ಹಿಂದೂ ರಾಷ್ಟ್ರವೊಂದನ್ನು ಕಟ್ಟಲು ಹುನ್ನಾರ ನಡೆಸಿದೆಯೇ… ಈಗ ಈ ಪ್ರಶ್ನೆ ವಿರೋಧ ಪಕ್ಷಗಳಿಗೆ ಸರ್ಕಾರದ ವಿರುದ್ಧ ಸಮರ ಸಾರಲು ಭೂರೀ ಭೋಜನವೇ ಸಿಕ್ಕಂತಾಗಿದೆ. ಮಿಲ್ಲಿ ಗೆಜೆಟ್ ಎಂಬ ಪ್ರತಿಷ್ಠಿತ ದೈನಿಕವೊಂದು ಇಂದು ಈ ವಿಶೇಷ ಸುದ್ದಿಯನ್ನು ಆಧಾರ ಸಹಿತ ವರದಿ ಮಾಡಿದ್ದು, ವಿರೋಧ ಪಕ್ಷಗಳಿಗೆ ಒಳ್ಳೆಯ ರಸಕವಳ ಸಿಕ್ಕಂತಾಗಿದೆ.

2015ರ ಜೂ.21 ವಿಶ್ವ ಯೋಗದಿನ ಆಯೋಜಿಸಿದ ಬಳಿಕ ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಪದ್ಧತಿಗಳನ್ನು ಪ್ರಚಾರ ಮಾಡುವ ನಿಟ್ಟಿನಲ್ಲಿ ಸರ್ಕಾರ ಸಂಸ್ಥೆಗೆ ಎಷ್ಟು ಜನ ಮುಸ್ಲಿಂ ಯೋಗ ಗುರುಗಳನ್ನು ತೆಗೆದುಕೊಂಡಿದೆ ಎಂಬ ಕುರಿತಂತೆ ಆರ್‌ಟಿಐನಲ್ಲಿ ಕೇಳಲಾದ ಪ್ರಶ್ನೆಗೆ, ಆರ್‌ಟಿಐ ಮೂಲಕ ಪಡೆದ ಉತ್ತರದಲ್ಲಿ ಈ ಅಂಶ ಕಂಡುಬಂದಿದೆ ಎಂದು ಮೂಲಗಳು ತಿಳಿಸಿವೆ. ಯಾವುದೇ ಕಾರಣಕ್ಕೂ ಆಯುಷ್ ಸಚಿವಾಲಯ ಈ ಇಲಾಖೆಗೆ ಮುಸಲ್ಮಾನರನ್ನು ನೇಮಕಾತಿ ಮಾಡಿಕೊಳ್ಳುವುದಿಲ್ಲ ಎಂಬ ಬಿಜೆಪಿ ಸರ್ಕಾರದ ನೀತಿ ಪತ್ರಕರ್ತ ಪುಷ್ಪ್‌ಶರ್ಮಾ ಅವರು ಆರ್‌ಟಿಐನಲ್ಲಿ ಪಡೆದಿರುವ ದಾಖಲೆಗಳಿಂದ ಸ್ಪಷ್ಟವಾಗಿದೆ.

ಒಟ್ಟು ಈ ಯೋಗ ತರಬೇತುದಾರರ ಹುದ್ದೆಗೆ 711 ಮಂದಿ ಮುಸ್ಲಿಂ ಶಿಕ್ಷಕರು ಅರ್ಜಿ ಸಲ್ಲಿಸಿದ್ದರು. ಆದರೆ, ಅವರಲ್ಲಿ ಒಬ್ಬರನ್ನೂ ನೇಮಕಾತಿ ಮಾಡಿಕೊಂಡಿಲ್ಲ. 26 ಜನರನ್ನು ಆಯ್ಕೆ ಮಾಡಿದ್ದು, ಎಲ್ಲರೂ ಹಿಂದೂಗಳೇ. ಇಷ್ಟೇ ಅಲ್ಲದೆ 2015ರ ಅಕ್ಟೋಬರ್‌ವರೆಗಿನ ಅವಧಿಯಲ್ಲಿ ಯೋಗ ಶಿಕ್ಷಕರ ಹುದ್ದೆಗೆ 3,841 ಮುಸ್ಲಿಂ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಆದರೆ, ಸರ್ಕಾರ ಈ ಎಲ್ಲ ಅರ್ಜಿಗಳನ್ನೂ ತಿರಸ್ಕರಿಸಿದೆ ಎಂಬ ಮಾಹಿತಿ ಆರ್‌ಟಿಐ ಮುಖಾಂತರ ಲಭ್ಯವಾಗಿದೆ.

Write A Comment