ರಾಷ್ಟ್ರೀಯ

ಬಾಬ್ರಿ ಮಸೀದಿ ಪ್ರಕರಣ ವಿಚಾರಣೆಯಿಂದ ಹಿಂದೆ ಸರಿದ ‘ಸುಪ್ರೀಂ’ ನ್ಯಾಯಮೂರ್ತಿ

Pinterest LinkedIn Tumblr

Babari maseedi

ನವದೆಹಲಿ: 1992ರ ಡಿಸೆಂಬರ್ 6ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಿರಿಯ ಮುಖಂಡರಾದ ಎಲ್‌.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಉಮಾ ಭಾರತಿ ಹಾಗೂ ಇತರರ ವಿರುದ್ಧದ ಕ್ರಿಮಿನಲ್ ಪಿತೂರಿ ಆರೋಪಗಳಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯಿಂದ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಯೊಬ್ಬರು ಹಿಂದೆ ಸರಿದಿದ್ದಾರೆ.

ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರನ್ನೊಳಗೊಂಡ ಪೀಠದ ನೇತೃತ್ವ ವಹಿಸಿದ್ದ ನ್ಯಾಯಮೂರ್ತಿ ವಿ. ಗೋಪಾಲ್ ಗೌಡ ಅವರು ಯಾವುದೇ ಕಾರಣ ನೀಡದೇ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದರು. ಬೇರೆ ಪೀಠಕ್ಕೆ ವರ್ಗಾಯಿಸುವ ನಿಟ್ಟಿನಲ್ಲಿ ಈ ವಿಷಯವನ್ನು ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಅವರ ಪೀಠದ ಎದುರು ಇಡೋಣ ಎಂದು ಅವರು ಹೇಳಿದ್ದಾರೆ.

ಎಲ್ ಕೆ ಅಡ್ವಾಣಿ ಸೇರಿದಂತೆ ಬಿಜೆಪಿ–ವಿಎಚ್‌ಪಿಯ 18 ಮುಖಂಡರ ವಿರುದ್ಧದ ಕ್ರಿಮಿನಲ್ ಪಿತೂರಿ ಆರೋಪಗಳನ್ನು ಕೈಬಿಟ್ಟಿರುವುದನ್ನು ಪ್ರಶ್ನಿಸಿ ಹಾಜಿ ಮಹಬೂಬ್‌ ಅಹ್ಮದ್ ಹಾಗೂ ಕೇಂದ್ರೀಯ ತನಿಖಾ ದಳ(ಸಿಬಿಐ) ಅರ್ಜಿಗಳನ್ನು ಸಲ್ಲಿಸಿತ್ತು.

ಭಾರತೀಯ ದಂಡಸಂಹಿತೆಯ ಸೆಕ್ಷನ್ 153ಎ(ವರ್ಗಗಳ ನಡುವೆ ದ್ವೇಷ ಬಿತ್ತುವಿಕೆ), ಸೆಕ್ಷನ್ 153ಬಿ(ರಾಷ್ಟ್ರೀಯ ಸಮಗ್ರತೆಗೆ ಧಕ್ಕೆಯುಂಟುಮಾಡಿದ್ದು) ಮತ್ತು ಸೆಕ್ಷನ್ 505ರ(ತಪ್ಪು ಹೇಳಿಕೆಗಳನ್ನು, ವದಂತಿಗಳನ್ನು ಹಬ್ಬಿಸಿ ದಂಗೆಯನ್ನುಂಟುಮಾಡುವುದು ಅಥವಾ ಸಾರ್ವಜನಿಕ ಶಾಂತಿ ವಿಚಲಿತಗೊಳಿಸುವುದು) ಅಡಿಯಲ್ಲಿ ಅಡ್ವಾಣಿ ಮತ್ತು ಇತರ 20 ಮಂದಿ ವಿರುದ್ಧ ಕೇಸು ದಾಖಲಾಗಿದೆ.

Write A Comment