
ಹೈದರಾಬಾದ್: ಯುವತಿಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಟಾಲಿವುಡ್ ಖ್ಯಾತ ನಟ ನಂದಮುರಿ ಬಾಲಕೃಷ್ಣ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಒಂದು ವೇಳೆ ನಾನು ಹುಡುಗಿಯರಿಗೆ ರೇಗಿಸಿದ್ರೆ ನನ್ನ ಅಭಿಮಾನಿಗಳು ಒಪ್ಪಲ್ಲ. ಆದ್ರೆ ಹುಡುಗಿಯರಿಗೆ ಮುತ್ತುಕೊಟ್ಟರೆ ಅಥವಾ ಗರ್ಭಿಣಿಯನ್ನಾಗಿ ಮಾಡಿದ್ರೆ ಅವರು ಖುಷಿ ಪಡ್ತಾರೆ. ನಾವು ಇದಕ್ಕೆ ಬದ್ಧವಾಗಿರಬೇಕು ಎನ್ನುವ ವಿವದಾತ್ಮಕ ಹೇಳಿಕೆಯನ್ನು ಬಾಲಕೃಷ್ಣ ನೀಡುವ ಮೂಲಕ ವಿವಾದವನ್ನು ಸೃಷ್ಟಿಸಿದ್ದಾರೆ.
ಇನ್ನೇನು ರಿಲೀಸ್ ಆಗಲು ಸಿದ್ದವಾಗಿರುವ ಸಾವಿತ್ರಿ ಚಿತ್ರದ ಆಡಿಯೋ ಕಾರ್ಯಕ್ರಮ 3 ದಿನಗಳ ಹಿಂದೆ ನಡೆದಿತ್ತು ಈ ವೇಳೆ ಇಂತಹ ಹೇಳಿಕೆ ಕೊಟ್ಟು ವಿವಾದಕ್ಕೆ ಸಿಲುಕಿದ್ದಾರೆ. ಈ ಸಂಬಂಧ ಸರೂರ್ ನಗರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಟಿಡಿಪಿಯಿಂದ ಹಿಂದೂಪರ್ ಕ್ಷೇತ್ರ ಶಾಸಕರಾಗಿರುವ ಬಾಲಕೃಷ್ಣ ಆಂಧ್ರ ಸಿಎಂ ಚಂದ್ರಬಾಬು ಬಾಯ್ಡು ಅವರ ಭಾಮೈದ. ಹೀಗಾಗಿ ಚಂದ್ರಬಾಬುನಾಯ್ಡು ಹಾಗು ಬಾಲಕೃಷ್ಣ ಮಹಿಳೆಯರ ಕ್ಷಮೆ ಕೇಳಬೇಕು ಎಂದು ನಟಿ ಹಾಗು ವೈಎಸ್ಆರ್ ಪಕ್ಷದ ಶಾಸಕಿ ರೋಜಾ ಒತ್ತಾಯ ಮಾಡಿದ್ದಾರೆ.