ರಾಷ್ಟ್ರೀಯ

ಅಸಹಜ ಮರಣಹೊಂದಿದ್ದಾರೆಯೇ ಕಲಾಭವನ್ ಮಣಿ ?

Pinterest LinkedIn Tumblr

800px-KalabhavanManiMay2010-e1457319856428ಕೊಚ್ಚಿ: ತನ್ನ ವಿಶಿಷ್ಟ ಮ್ಯಾನರಿಸಂನಿಂದಲೇ ದಕ್ಷಿಣ ಭಾರತೀಯ ಸಿನಿ ಪ್ರಿಯರಿಗೆ ಇಷ್ಟವಾಗಿದ್ದ ನಟ ಕಲಾಭವನ್ ಮಣಿ ಸಾವಿನ ಪ್ರಕರಣ  ಹೊಸ ತಿರುವು ಪಡೆದಿದ್ದು ನಟ ಮಣಿ ಅಸಹಜ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಸಂಶಯ ವ್ಯಕ್ತ ಪಡಿಸಿದ್ದಾರೆ.

ಲಿವರ್​ ಸಮಸ್ಯೆ ಹಾಗೂ ರಕ್ತದವಾಂತಿಯಿಂದ ಶನಿವಾರ ರಾತ್ರಿ ಮಣಿ ಚಾಲಕ್ಕಾಡಿನಲ್ಲಿರುವ ತೋಟದ ಮನೆಯಲ್ಲಿ  ಪ್ರಜ್ಣೆತಪ್ಪಿ ಬಿದ್ದಿದ್ದರು. ಇವರನ್ನು ಮೊದಲಿಗೆ ಸಮೀಪದ ಆಸ್ಪತ್ರೆಗೆ ದಾಖಲಿಸಿದರಾದರೂ ನಂತರ ಕೊಚ್ಚಿಯ ಖಾಸಗಿ ಆಸ್ಪತ್ರೆ ದಾಖಲಿಸಿದ್ದರು, ಅಲ್ಲಿ  ಚಿಕಿತ್ಸೆ ಫಲಿಸದೆ ನಿಧನರಾಗಿದ್ದರು.

ಆದರೆ, ಮರಣೋತ್ತರ ಪರೀಕ್ಷೆ ನಡೆಸಿದ ಸಂದರ್ಬದಲ್ಲಿ ಮಣಿಯವರ ದೇಹದಲ್ಲಿ ಮಿಥೇಲ್ ಆಲ್ಕೋಹಾಲ್ ಅಂಶ ಕಂಡುಬಂದಿದೆ ಎನ್ನಲಾಗಿದೆ.  ಅಲ್ಲದೆ, ಶನಿವಾರ ರಾತ್ರಿ  ತೋಟದ ಮನೆಯಲ್ಲಿ ಮಣಿಯವರ ಜೊತೆ ಇನ್ನೂ ಮೂವರು ಬಂದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Write A Comment