ಕರ್ನಾಟಕ

ಲವ್‌ ಮಾಡಿದಕ್ಕೆ ಹುಡ್ಗಿ ಮನೆಯವರಿಂದ ಯುವಕನಿಗೆ ಸಕತ್ ಗೂಸಾ

Pinterest LinkedIn Tumblr

crime_graphic_web1ಬೆಂಗಳೂರು: ಯುವತಿಯೊಬ್ಬಳನ್ನು ಪ್ರೀತಿಸಿದಕ್ಕೆ ಪ್ರಿಯಕರನ ಮೇಲೆ ಯುವತಿಯ ಮನೆಯವರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಇಲ್ಲಿನ ಹೆಬ್ಬಾಳದಲ್ಲಿ ನಡೆದಿದೆ.

ವಾಟರ್ ಬ್ಯುಸಿನೆಸ್ ಮಾಡುವ ಕುಮಾರ್ ಎಂಬಾತ ಹಲ್ಲೆಗೊಳಗಾದ ಯುವಕನಾಗಿದ್ದಾನೆ. ಕಳೆದ 4ವರ್ಷಗಳಿಂದ ಕುಮಾರ್ ಹಾಗೂ ಕುಮುದಾ ಪರಸ್ಪರ ಪ್ರೀತಿಸುತ್ತಿದ್ದು, ಈ ವಿಷಯ ನಿನ್ನೆ ಯುವತಿಯ ಮನೆಯವರಿಗೆ ಗೊತ್ತಾಗಿದೆ. ಬಳಿಕ ಉಪಾಯದಿಂದ ಕುಮಾರ್‌ಗೆ ಯುವತಿಯಿಂದಲೇ ಫೋನ್ ಮಾಡಿಸಿ ಮನೆಗೆ ಕರೆಸಿಕೊಂಡಿದ್ದಾರೆ.

ಈ ವೇಳೆ ಕುಮಾರ್‌ ಮನೆಗೆ ಬಂದಾಗ ಯುವತಿಯನ್ನು ಕೋಣೆಯಲ್ಲಿ ಕೂಡಿ ಹಾಕಿದ ಪೋಷಕರು, ಪ್ರೀಯಕರನ ಮೇಲೆ ಯುವತಿಯ ತಂದೆ ಹಾಗೂ ಅಣ್ಣ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಸದ್ಯ ತೀವ್ರವಾಗಿ ಗಾಯಗೊಂಡಿರುವ ಯುವಕ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment