ರಾಷ್ಟ್ರೀಯ

ಜೆಎನ್ ಯು ಪ್ರಕರಣ: 3 ಚಾನೆಲ್ ಗಳ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಮುಂದಾದ ದೆಹಲಿ ಸರ್ಕಾರ

Pinterest LinkedIn Tumblr

New Delhi: JNU students welcome JNUSU President Kanhaiya Kumar after he reached at the campus upon his release on bail, in New Delhi on Thursday. PTI Photo by Kamal Singh(PTI3_3_2016_000235B)

ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ(ಜೆಎನ್ ಯು)ದಲ್ಲಿ ಫೆಬ್ರವರಿ 9ರಂದು ನಡೆದ ಕಾರ್ಯಕ್ರಮದಲ್ಲಿ ದೇಶ ವಿರೋಧಿ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ತಿರುಚಿದ ಆರೋಪ ಎದುರಿಸುತ್ತಿರುವ ಮೂರು ಚಾನಲ್ ಗಳ ವಿರುದ್ಧ ಕೋರ್ಟ್ ಮೆಟ್ಟಿಲೇರುವಂತೆ ದೆಹಲಿ ಸರ್ಕಾರ ತನ್ನ ಕಾನೂನು ಘಟಕಕ್ಕೆ ಆದೇಶಿಸಿದೆ.

ಜೆಎನ್ ಯು ಘಟನೆಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ವರದಿ ಬಂದ ನಂತರ ದೆಹಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಮ್ಯಾಜಿಸ್ಟ್ರೇಚ್ ವರದಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿಲ್ಲ ಮತ್ತು ಹಿಂಸೆಗೆ ಪ್ರಚೋದನೆ ನೀಡುವಂತಹ ಹೇಳಿಕೆಗಳನ್ನು ತಿರುಚಲಾಗಿದೆ ಎಂದು ಹೇಳಿದೆ.

ಘಟನೆಗೆ ಸಂಬಂಧಿಸಿದಂತೆ ಫೆ.9 ಮತ್ತು 11ರಂದು ಟಿವಿಯಲ್ಲಿ ಪ್ರಸಾರವಾದ ಎರಡೂ ವಿಡಿಯೋಗಳು ನಕಲಿ ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ಹೇಳಿತ್ತು.

ದೇಶ ವಿರೋಧಿ ಘೋಷಣೆ ಕೂಗಿದ್ದಾರೆನ್ನಲಾದ 2 ಜೆಎನ್ ಯು ವಿಡಿಯೋ ತಿರುಚಿರುವುದು ಸ್ಪಷ್ಟ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ತನಿಖಾ ವರದಿಯನ್ನು ದೆಹಲಿ ಸರ್ಕಾರ ಬಹಿರಂಗಪಡಿಸಿತ್ತು.

ಜೆಎನ್ ಯು ಪ್ರಕರಣದ ನಂತರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಸರ್ಕಾರ ಹೈದರಾಬಾದ್ ಮೂಲದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ 7 ವಿಡಿಯೋಗಳನ್ನು ರವಾನಿಸಿತ್ತು. ಇದರಲ್ಲಿ 5 ವಿಡಿಯೋಗಳು ಒರಿಜಿನಲ್ ಆಗಿದ್ದು, ಅದರಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಅಂಶ ಇರಲಿಲ್ಲ. ಎರಡೂ ವಿಡಿಯೋವನ್ನು ತಿರುಚಿರುವುದು ಸ್ಪಷ್ಟವಾಗಿದೆ. ಅಲ್ಲದೇ ಅದರಲ್ಲಿರುವ ಧ್ವನಿ ಕೂಡಾ ಆ ಸಮಾರಂಭದಲ್ಲಿ ಹಾಜರಿದ್ದವರದ್ದಲ್ಲ, ಆ ಧ್ವನಿ ಸೇರಿಸಿರುವುದಾಗಿದೆ ವರದಿ ಹೇಳಿತ್ತು.

Write A Comment