ಮುಂಬೈ

ಕನ್ಹಯ್ಯ ಕುಮಾರ್ ಪ್ರಚಾರ ಪಡೆಯಲು ಬಿಟ್ಟಿರುವುದಕ್ಕೆ ಬಿಜೆಪಿ ವಿರುದ್ಧ ಶಿವಸೇನೆ ಅಸಮಾಧಾನ

Pinterest LinkedIn Tumblr

kanhaiya

ಮುಂಬೈ: ಜೆ ಎನ್ ಯ ವಿವಿಯಲ್ಲಿ ದೇಶವಿರೋಧಿ ಘೋಷಣೆ ಪ್ರಕರಣದ ಮೂಲಕ ಬೆಳಕಿಗೆ ಬಂದ ಕನ್ಹಯ್ಯ ಕುಮಾರ್ ನನ್ನು ಬಿಟ್ಟಿ ಪ್ರಚಾರ ಪಡೆಯಲು ಬಿಜೆಪಿ ಅವಕಾಶ ನೀಡಿದೆ ಎಂದು ಶಿವಸೇನೆ ಅಸಮಾಧಾನ ವ್ಯಕ್ತಪಡಿಸಿದೆ.

ದೇಶದ್ರೋಹ ಆರೋಪ ಎದುರಿಸುತ್ತಿರುವ ಅನೇಕರು ಇನ್ನೂ ಜೈಲಿನಲ್ಲೇ ಇರಬೇಕಾದರೆ ಕನ್ಹಯ್ಯ ಕುಮಾರ್ ಗೆ ಶೀಘ್ರವೇ ಜಾಮೀನು ಪಡೆಯುವುದು ಹೇಗೆ ಸಾಧ್ಯವಾಯಿತು ಎಂದು ಶಿವಸೇನೆ ಪ್ರಶ್ನಿಸಿದೆ. ಕನ್ಹಯ್ಯ ಕುಮಾರ್ ಬಿಟ್ಟಿ ಪ್ರಚಾರ ಪಡೆಯುತ್ತಿದ್ದಾನೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದರು ಅದಕ್ಕೆ ಯಾರು ಕಾರಣ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಪ್ರಶ್ನಿಸಿದೆ.

ಸಣ್ಣ ವಸ್ತುಗಳಿಗೂ ಸಹ ಹಣ ಪಾವತಿ ಮಾಡಿ ಪಡೆಯಬೇಕಾಗುತ್ತದೆ. ಮಧ್ಯಮ ವರ್ಗದ ಜನರು ಪಿಎಫ್ ನಲ್ಲಿ ಉಳಿಸುತ್ತಿದ್ದ ಹಣಕ್ಕೂ ತೆರಿಗೆ ಕಟ್ಟಬೇಕಾದ ಸ್ಥಿತಿ ಎದುರಾಗಿದೆ. ಪಟೇಲ್ ಸಮುದಾಯಕ್ಕೆ ಮೀಸಲಾತಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಹಾರ್ದಿಕ್ ಪಟೇಲ್ ರಾಷ್ಟ್ರದ್ರೋಹದ ಆರೋಪದಡಿ ಇನ್ನೂ ಜೈಲಿನಲ್ಲೇ ಇದ್ದಾನೆ ಎನ್ನಲಾಗುತ್ತಿದೆ, ಇನ್ನು ಕರ್ನಲ್ ಪುರೋಹಿತ್ ಮತ್ತು ಸಾಧ್ವಿ ಪ್ರಜ್ಞಾ ಅವರದ್ದೂ ಇದೇ ಸ್ಥಿತಿ. ಆದರೆ ಕನ್ಹಯ್ಯ ಕುಮಾರ್ ಗೆ ಹೇಗೆ ಜಾಮೀನು ಪಡೆಯುವುದು ಸಾಧ್ಯವಾಯಿತು ಎಂದು ಶಿವಸೇನೆ ಬಿಜೆಪಿಯನ್ನು ಕೇಳಿದೆ.

Write A Comment