ರಾಷ್ಟ್ರೀಯ

ಬದಲಾಯ್ತು ನರೇಂದ್ರ ಮೋದಿ ಹೇರ್ ಸ್ಟೈಲ್

Pinterest LinkedIn Tumblr

modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹೇರ್ ಸ್ಟೈಲ್ ಚೇಂಜ್ ಮಾಡಿಕೊಂಡಿರುವುದು ಲೋಕಸಭೆಯಲ್ಲಿ ಎಲ್ಲರ ಗಮನ ಸೆಳೆದಿದೆ. ತಮ್ಮ ಗುಂಗುರು ಕೂದಲನ್ನು ನೀಟಾಗಿ ಬಾಚಿಕೊಂಡು, ಸಂಸತ್ತಿನಲ್ಲಿ ಮೋದಿ ಫ್ರೆಶ್ ಆಗಿ ಕಾಣುತ್ತಿದ್ದರು.

ಕಾಂಗ್ರೆಸ್‌ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಅವರು ಮೋದಿ ತಲೆ ಕಡೆ ಗಮನ ಹರಿಸಿದ್ದಾರೆ. ಮಾತ್ರವಲ್ಲದೇ ಮೋದಿಯ ಕೇಶವಿನ್ಯಾಸದ ಬಗ್ಗೆ ಟ್ವೀಟ್ ಮಾಡುವ ಮೂಲಕ ಎಲ್ಲರ ಗಮನಕ್ಕೆ ತಂದಿದ್ದಾರೆ.

ಮೋದಿ ತಮ್ಮ ಹೇರ್‌ ಸ್ಟೈಲ್‌ ಬದಲಾಯಿಸಿಕೊಂಡಿದ್ದಾರೆ. ಹೀಗಾಗಿ ಜನರು ಕೇಳುತ್ತಿದ್ದಾರೆ ಮೋದಿ ಅವರ ಕೇಶ ವಿನ್ಯಾಸಕ ಯಾರು? ಎಂಬುದಾಗಿ ದಿಗ್ವಿಜಯ್ ಸಿಂಗ್ ಟ್ವಿಟ್ ಮಾಡಿದ್ದಾರೆ.

ಲೋಕಸಭೆಯಲ್ಲಿ ವಿರೋಧ ಪಕ್ಷದವರಿಗೆ ಸಲಹೆ ನೀಡುವ ಸಂದರ್ಭದಲ್ಲಿ ಎಲ್ಲರ ಚಿತ್ತ ಮೋದಿ ವಾಕ್ಚಾತುರ್ಯದತ್ತ ನೆಟ್ಟಿತ್ತು. ಆದರೆ ದಿಗ್ವಿಜಯ ಸಿಂಗ್ ಮಾತ್ರ ಮೋದಿ ಕೇಶ ವಿನ್ಯಾಸದ ಬಗ್ಗೆ ಗಮನ ಹರಿಸಿದ್ದರು.

Write A Comment