ರಾಷ್ಟ್ರೀಯ

ಅಲಹಾಬಾದ್ ವಿವಿ ವಿದ್ಯಾರ್ಥಿನಿ ಗೆ ಕಿರುಕುಳ: ವಿದ್ಯಾರ್ಥಿ ರೀಚಾಸಿಂಗ್ ಆರೋಪ

Pinterest LinkedIn Tumblr

RICHAನವದೆಹಲಿ, ಮಾ.5- ದೇಶದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಒಳಗೊಳಗೇ ನಡೆಯುತ್ತಿದ್ದ ಪ್ರಕರಣಗಳು ಈಗ ಒಂದೊಂದೇ ಬೆಳಕಿಗೆ ಬರುತ್ತಿವೆ. ಹೈದ್ರಾಬಾದ್ ವಿವಿ, ಜವಾಹರ್‌ಲಾಲ್ ನೆಹರು ವಿವಿ, ಅಲಿಗಢ ವಿವಿಗಳ ನಂತರ ಇದೀಗ ಅಲಹಾಬಾದ್ ವಿವಿಯ ವಿದ್ಯಾರ್ಥಿ ಸಂಘದ ಮೊತ್ತ ಮೊದಲ ಮಹಿಳಾ ಅಧ್ಯಕ್ಷೆಗೆ ಆಡಳಿತ ಮಂಡಳಿ ಇನ್ನಿಲ್ಲದ ಕಿರುಕುಳ ನೀಡುತ್ತಿರುವುದು ಬಹಿರಂಗಗೊಂಡಿದೆ.

ವಿವಿ ಸೆನೆಟ್‌ಗೆ ಕಿರುಕುಳದ ಆರೋಪ ಎದುರಿಸುತ್ತಿರುವವರ ನೇಮಕ ಮಾಡುವುದನ್ನು ವಿರೋಧಿಸಿದ ನಂತರ ನನಗೆ ಪದೇ ಪದೇ ಆಡಳಿತ ಮಂಡಳಿಯವರು ಇಲ್ಲದ ತೊಂದರೆ ಕೊಡುತ್ತಿದ್ದಾರೆ ಎಂದು ವಿದ್ಯಾರ್ಥಿ ನಾಯಕಿ ರೀಚಾಸಿಂಗ್ ಹೇಳಿದ್ದಾರೆ.

ವಿಶ್ವವಿದ್ಯಾಲಯದ ಆವರಣದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಬಿಜೆಪಿ ಸಂಸದ ಯೋಗಿ ಆದಿತ್ಯನಾಥ್ ಅವರ ಕಾರ್ಯಕ್ರಮವನ್ನು ವಿರೋಧಿಸಿದ ನಂತರ ನನ್ನನ್ನು ವಿವಿಯಿಂದ ಹೊರಹಾಕುವ ಪ್ರಯತ್ನವನ್ನೂ ಆಡಳಿತ ಮಂಡಳಿ ಮಾಡುತ್ತಿದೆ ಎಂದು ರೀಚಾಸಿಂಗ್ ಗಂಭೀರ ಆರೋಪ ಮಾಡಿದ್ದಾರೆ. ನಾನು ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಮೀಸಲಾತಿ ಕೆಟಗರಿ ಅಡಿಯಲ್ಲೇ ಪ್ರವೇಶ ಪಡೆದಿದ್ದರೂ, ಈಗ ಅದನ್ನು ಬದಲಾಯಿಸಿ ನನ್ನ ಪ್ರವೇಶಾತಿಯನ್ನೇ ವಜಾಗೊಳಿಸುವ ಸಿದ್ಧತೆ ನಡೆಸಲಾಗಿದೆ ಎಂದು ರೀಚಾಸಿಂಗ್ ಸುದ್ದಿ ಮಾಧ್ಯಮಗಳೆದುರು ಕಳವಳ ವ್ಯಕ್ತಪಡಿಸಿದ್ದಾರೆ.

Write A Comment