ರಾಷ್ಟ್ರೀಯ

ಗಡಿಯಲ್ಲಿ ಪಾಕಿಸ್ತಾನದ ಮೀನುಗಾರಿಕಾ ದೋಣಿ ಜಪ್ತಿ

Pinterest LinkedIn Tumblr

PAKಭುಜ್: ಭಾರತ-ಪಾಕ್ ಗಡಿ ಪ್ರದೇಶವಾದ ಕಛ್ ಕರಾವಳಿ ಪ್ರದೇಶದ ಕೋಟೇಶ್ವರ ಭಾಗದಲ್ಲಿ ಭಾರತೀಯ ಗಡಿ ಭದ್ರತಾ ಪಡೆ (ಬಿಎಸ್​ಎಫ್) ಪಾಕಿಸ್ತಾನದ ಮೀನುಗಾರಿಕಾ ದೋಣಿಯೊಂದನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಗಸ್ತು ತಿರುಗುತ್ತಿದ್ದ ಭಾರತೀಯ ಗಡಿ ಭದ್ರತಾ ಪಡೆಯನ್ನು ಕಂಡ ತತ್ ಕ್ಷಣವೇ ದೋಣಿಯಲ್ಲಿ ಇದ್ದವರು ದೋಣಿಯನ್ನು ಬಿಟ್ಟು ಪಾಕ್ ಕಡೆಗೆ ಪರಾರಿಯಾದರು. ಭದ್ರತಾ ಸಿಬ್ಬಂದಿ ಕೂಡಲೇ ದೋಣಿಯನ್ನು ವಶ ಪಡಿಸಿಕೊಂಡರು. ದೋಣಿಯಲ್ಲಿ ಆಕ್ಷೇಪಾರ್ಹ ವಸ್ತುಗಳೇನೂ ಕಂಡು ಬಂದಿಲ್ಲ ಎಂದು ಬಿಎಸ್​ಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಐದು ತಿಂಗಳಲ್ಲಿ ಪಾಕ್​ನಿಂದ ಗಡಿ ಪ್ರದೇಶ ಉಲ್ಲಂಘನೆ ಮಾಡಿದ ಐದು ಬೊಟುಗಳನ್ನು ಜಪ್ತಿ ಮಾಡಲಾಗಿದೆ.

Write A Comment