ರಾಷ್ಟ್ರೀಯ

ಆಡ್ಕಾಮ್ ನಿಂದ ಪ್ರತಿ ಯುನಿಟ್ ಗೆ 3 ,600 ರೂ ದರದಲ್ಲಿ ಮೊಬೈಲ್ ಖರೀದಿಸಿದ್ದ ರಿಂಗಿಂಗ್ ಬೆಲ್ಸ್

Pinterest LinkedIn Tumblr

A Freedom 251 smartphone, which is to be priced at Indian Rupees 251 or USD 3.6 approximately, is shown during its release by officials of Ringing Bells Pvt. Ltd. in New Delhi, India, Wednesday, Feb. 17, 2016.(AP Photo/Saurabh Das)

ನವದೆಹಲಿ: ಅಗ್ಗದ ಸ್ಮಾರ್ಟ್ ಫೋನ್ ಎಂಬ ಪ್ರಚಾರ ಪಡೆದಿದ್ದ ಫ್ರೀಡಂ 251 ಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಐಟಿ ಉತ್ಪನ್ನಗಳ ಸಂಸ್ಥೆ ಆಡ್ಕಾಮ್ ರಿಂಗಿಂಗ್ ಬೆಲ್ಸ್ ಗೆ ಪ್ರತಿ ಯುನಿಟ್ ಗೆ 3 ,600 ರೂಪಾಯಿ ದರದಲ್ಲಿ ಮೊಬೈಲ್ ಹ್ಯಾಂಡ್ ಸೆಟ್ ಗಳನ್ನು ಮಾರಾಟ ಮಾಡಿದ್ದಾಗಿ ಹೇಳಿದೆ.

ರಿಂಗಿಂಗ್ ಬೆಲ್ಸ್ ತನ್ನಿಂದ ಖರೀದಿಸಿದ ಮೊಬೈಲ್ ಗಳನ್ನು ಪುನಃ ಮಾರಾಟ ಮಾಡುವ ಬಗ್ಗೆ ಸಂಸ್ಥೆಗೆ ಅರಿವಿರಲಿಲ್ಲ ಎಂದಿರುವ ಆಡ್ಕಾಮ್, ರಿಂಗಿಂಗ್ ಬೆಲ್ಸ್ ನ ಚಟುವಟಿಕೆಗಳು ತನ್ನ ಬ್ರಾಂಡ್ ಹಾಗೂ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದೆ.

ಪ್ರಪಂಚದ ಅತಿ ಅಗ್ಗದ ಸ್ಮಾರ್ಟ್ ಫೋನ್ ನನ್ನು ಮಾರಾಟ ಮಾಡುವುದಾಗಿ ರಿಂಗಿಂಗ್ ಬೆಲ್ ಸಂಸ್ಥೆ ತಿಳಿಸಿತ್ತು. ಅಲ್ಲದೇ ಸಂಸ್ಥೆಯ ಅಗ್ಗದ ಫೋನ್ ಗಳು ಮಾರುಕಟ್ಟೆಯಲ್ಲಿ 3 ,999 ರೂ ಬೆಲೆ ಹೊಂದಿರುವ ಆಡ್ಕಾಮ್ ನ ಐಕಾನ್ 4 ಮಾದರಿಗಳನ್ನೇ ಹೋಲುತ್ತಿತ್ತು.

ಲಕ್ಷಾಂತರ ಗ್ರಾಹಕರಿಗೆ ಮಾರಾಟ ಮಾಡುವ ರೀತಿಯಲ್ಲೇ ರಿಂಗಿಂಗ್ ಬೆಲ್ ಗೂ ಮಾರಾಟ ಮಾಡಿದ್ದೆವು, ಆದರೆ ಅದನ್ನು ಅಗ್ಗದ ದರಕ್ಕೆ ಪುನಃ ಮಾರಾಟ ಮಾಡುತ್ತಾರೆ ಎಂಬ ಬಗ್ಗೆ ಅರಿವಿರಲಿಲ್ಲ ನಮ್ಮ ಸಂಸ್ಥೆಯ ಮೊಬೈಲ್ ಫೋನ್ ಗಳನ್ನು ರೂ 251 ಕ್ಕೆ ಮಾರಾಟ ಮಾಡಿರುವುದರಿಂದ ರಿಂಗಿಂಗ್ ಬೆಲ್ಸ್ ವಿರುದ್ಧ ಕಾನೂನು ಕ್ರಮ ಜರುಗಿಸಲು ನಾವು ಹಿಂಜರಿಯುವುದಿಲ್ಲ ಎಂದು ಆಡ್ಕಾಮ್ ನ ಸಂಜೀವ್ ಭಾಟಿಯಾ ಹೇಳಿದ್ದಾರೆ.

Write A Comment