ರಾಷ್ಟ್ರೀಯ

ರಾಜೀವ್ ಹಂತಕರ ಬಿಡುಗಡೆ ವಿಷಯ ಕುರಿತು ಲೋಕಸಭೆ ಕೋಲಾಹಲ. ಮಲ್ಲಿಕಾರ್ಜುನ ಖರ್ಗೆ ಕೆಂಡಾಮಂಡಲ

Pinterest LinkedIn Tumblr

kargeರಾಜೀವ್‌ಗಾಂಧಿಯವರ ಹಂತಕರನ್ನು ಶಿಕ್ಷೆಯಿಂದ ಮುಕ್ತಗೊಳಿಸಬೇಕು ಎಂಬ ತ.ನಾಡು ಸರ್ಕಾರದ ಪ್ರಸ್ತಾಪ ಅತ್ಯಂತ ದುರದೃಷ್ಟಕರ ಮತ್ತು ಹೇಯವಾದ ಕ್ರಮ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಬಣ್ಣಿಸಿದರು. ಜಯಲಲಿತಾ ಸರ್ಕಾರದ ಈ ಪ್ರಸ್ತಾಪದ ವಿರುದ್ಧ ಕೆಂಡಾಮಂಡಲರಾದ ಖರ್ಗೆ, ಇದರಂತಹ ಕೆಟ್ಟ ವಿಚಾರ ಮತ್ತೊಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂದು ಸದನ ಸಮಾವೇಶಗೊಳ್ಳುತ್ತಿ ದ್ದಂತೆಯೇ ರಾಜೀವ್‌ಗಾಂಧಿ ಹಂತಕರ ಬಿಡುಗಡೆ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್, ಎಐಎಡಿಎಂಕೆ ಸಂಸದರ ನಡುವೆ ತೀವ್ರ ವಾಗ್ಯುದ್ಧವೇ ನಡೆಯಿತು. ರಾಜೀವ್‌ಗಾಂಧಿ ಹಂತಕರ ಬಿಡು ಗಡೆಗೆ ಸಹಕರಿಸುವಂತೆ ತ.ನಾಡು ಸರ್ಕಾರ ನಿನ್ನೆ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು.
ಎಐಎಡಿಎಂಕೆ ಸದಸ್ಯರ ಧೋರಣೆಯನ್ನು ತೀವ್ರವಾಗಿ ವಿರೋಧಿಸಿದ ಕಾಂಗ್ರೆಸ್ ಸದಸ್ಯರು, ಇಂತಹ ಪ್ರಸ್ತಾಪಕ್ಕೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು. ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಇದೊಂದು ಹೀನಾಯವಾದ ವಿಚಾರವಾಗಿದ್ದು, ಇದನ್ನು ಪರಿಗಣಿಸಬಾರದು ಎಂದು ಒತ್ತಾಯಿಸಿದರು. ಈ ಸಂದರ್ಭ ತಮಿಳುನಾಡು ಎಐಎಡಿಎಂಕೆ ಸದಸ್ಯರು ಲೋಕಸಭಾಧ್ಯಕ್ಷರ ಎದುರಿನ ಬಾವಿಗೆ ನುಗ್ಗಿ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭ ಗಲಾಟೆಯ ನಡುವೆಯೇ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯನಾಯ್ಡು, ಪ್ರಶ್ನೋತ್ತರ ವೇಳೆಯ ಬಳಿಕ ಈ ವಿಚಾರದ ಚರ್ಚೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು. ಈ ವಿಚಾರದ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಲು ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅನುಮತಿ ನೀಡಿದರು. ಆಗ ಮಲ್ಲಿಕಾರ್ಜುನ ಖರ್ಗೆಯವರು ತಮಿಳುನಾಡು ಸರ್ಕಾರದ ಪ್ರಸ್ತಾಪಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ನಂತರ ಪಕ್ಷದ ಉಪಾಧ್ಯಕ್ಷ ರಾಹುಲ್‌ಗಾಂಧಿ ಮಾತನಾಡಿ, ನೌಕರರ ಇಪಿಎಫ್ ಮೇಲಿನ ಬಡ್ಡಿ ಹೇರಿಕೆ ಕ್ರಮ ಸರಿಯಲ್ಲ. ಇದನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.

Write A Comment