ಮನೋರಂಜನೆ

ಪಾಕ್ ಮ್ಯಾಚ್ ನಿಂದಾಗಿ ಮತ್ತೆ ಒಂದಾಗಿದ್ದಾರೆ ಕೊಹ್ಲಿ-ಅನುಷ್ಕಾ !

Pinterest LinkedIn Tumblr

anushka-sharma-viratkohli

ಮುಂಬೈ: ಏಷ್ಯಾಕಪ್ ಟಿ 20ಯಲ್ಲಿ ಪಾಕಿಸ್ತಾನವನ್ನು ಭಾರತ ಸೋಲಿಸಿದ್ದು ಹಳೇ ಸುದ್ದಿ. ಆದ್ರೆ ಈ ಪಂದ್ಯ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಾಗೂ ಕ್ರಿಕೆಟರ್ ವಿರಾಟ್ ಕೊಹ್ಲಿ ಹತ್ತಿರವಾಗುವಂತೆ ಮಾಡಿದೆ.

ಹೌದು. ಏಷ್ಯಾಕಪ್‍ನಲ್ಲಿ ಪಾಕಿಸ್ತಾನದ ವಿರುದ್ಧ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಮಾಡಿ ಮ್ಯಾನ್ ಆಫ್ ದಿ ಮ್ಯಾಚ್ ಗೌರವಕ್ಕೆ ಪಾತ್ರರಾಗಿದ್ದ ಕೊಹ್ಲಿಗೆ ಅನುಷ್ಕಾ ಅಭಿನಂದಿಸಿದ್ದಾರೆ. ವಿರಾಟ್‍ಗೆ ಕರೆ ಮಾಡಿ ಅನುಷ್ಕಾ ವಿಶ್ ಮಾಡಿದ್ದಾರೆ ಎನ್ನಲಾಗಿದೆ.

ಕೊನೆಗೂ ಅನುಷ್ಕಾ ಮುಂದೆ ಬಂದು ವಿರಾಟ್‍ಗೆ ವಿಶ್ ಮಾಡಿರುವುದು ಮತ್ತೆ ಈ ಜೋಡಿ ಹಕ್ಕಿಗಳು ಒಂದಾಗಬಹುದು ಎಂಬ ಭರವಸೆಯನ್ನು ಮೂಡಿಸಿದೆ. ಒಟ್ಟಿನಲ್ಲಿ ಪಾಕ್ ಮ್ಯಾಚ್‍ನ ಕೊಹ್ಲಿ ಸಾಧನೆ ಅನುಷ್ಕಾ ಕರೆ ಮಾಡುವಂತೆ ಮಾಡಿರುವುದಂತೂ ಸುಳ್ಳಲ್ಲ.

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಬ್ರೇಕ್ ಅಪ್ ಆಗಿದೆ ಎನ್ನುವುದರ ಬಗ್ಗೆ ತಿಂಗಳ ಹಿಂದಿನಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಲೇ ಇದೆ. ವೃತ್ತಿ ಜೀವನದಲ್ಲಿ ಇನ್ನೂ ಮುಂದೆ ಸಾಗಬೇಕೆಂದಿರುವ ಅನುಷ್ಕಾಳಿಗೆ ವಿರಾಟ್ ಮದುವೆ ಪ್ರಸ್ತಾಪ ಮಾಡಿದ್ದೆ ಬ್ರೇಕ್‍ಅಪ್‍ಗೆ ಕಾರಣವೆನ್ನಲಾಗಿದೆ. ಆದರೆ ಈ ಬಗ್ಗೆ ಇಬ್ಬರೂ ಕೂಡ ಎಲ್ಲೂ ಅಧಿಕೃತವಾಗಿ ಹೇಳಿಕೆ ನೀಡದೆ ಸುಮ್ಮನಿದ್ದಾರೆ.

Write A Comment