ರಾಷ್ಟ್ರೀಯ

ಅಪ್ರಾಪ್ತೆ ಮೇಲೆ ಅತ್ಯಾಚಾರ; ಪಾದ್ರಿಗೆ 40 ವರ್ಷ ಕಠಿಣ ಜೈಲು ಶಿಕ್ಷೆ

Pinterest LinkedIn Tumblr

paadri

ತಿರುವನಂತಪುರಂ: ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ ಪಾದ್ರಿಯೊಬ್ಬರಿಗೆ ಕೇರಳದ ತ್ರಿಸ್ಸೂರಿನ ವಿಶೇಷ ನ್ಯಾಯಾಲಯ ಪೋಕ್ಸೋ ಕಾಯ್ದೆಯಡಿ 40 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

35 ವರ್ಷ ವಯಸ್ಸಿನ ಸಾನಿಲ್ ಕೆ ಜೇಮ್ಸ್ 2014ರ ಏಪ್ರಿಲ್‍ನಲ್ಲಿ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ ವಿಷಯ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಬಾಲಕಿಯ ಶಾಲೆಯಲ್ಲಿ ಕಳೆದ ಫೆಬ್ರವರಿಯಲ್ಲಿ ನಡೆದ ಕೌನ್ಸಿಲಿಂಗ್‍ನಲ್ಲಿ ಬಾಲಕಿ ತನ್ನ ಮೇಲೆ ನಡೆದ ಅತ್ಯಾಚಾರದ ಬಗ್ಗೆ ಹೇಳಿಕೊಂಡಿದ್ದಳು. ನಂತರ ತನ್ನಂತೆ ಇತರರ ಮೇಲೂ ಪಾದ್ರಿ ಅತ್ಯಾಚಾರವಗಿರುವುದನ್ನು ಬಹಿರಂಗಪಡಿಸಿದ್ದಳು.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕೆಪಿ ಸುಧೀರ್ ಬಾಲಕಿಗೆ 3 ಲಕ್ಷ ರೂ. ಪರಿಹಾರ ಹಣ ನೀಡಬೇಕೆಂದು ಆದೇಶಿಸಿದ್ದು, ಪಾದ್ರಿಗೆ 40 ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.

Write A Comment