ಅಂತರಾಷ್ಟ್ರೀಯ

ಏಷ್ಯಾಕಪ್ ಫೈನಲ್‍ಗೆ ಭಾರತ; ಲಂಕಾ ವಿರುದ್ಧ 5 ವಿಕೆಟ್‍ಗಳ ಜಯ

Pinterest LinkedIn Tumblr

crick

ಮೀರ್‍ಪುರ್: ಏಷ್ಯಾಕಪ್ ಟಿ-20ಯಲ್ಲಿ ಶ್ರೀಲಂಕಾವನ್ನು 5 ವಿಕೆಟ್‍ಗಳಿಂದ ಸೋಲಿಸುವ ಮೂಲಕ ಭಾರತ ಸುಲಭವಾಗಿ ಫೈನಲ್ ಪ್ರವೇಶಿಸಿದೆ.

ಗೆಲ್ಲಲು 139 ರನ್‍ಗಳ ಸವಾಲನ್ನು ಪಡೆದ ಭಾರತ ಕೊಹ್ಲಿ ಔಟಾಗದೇ 56 ರನ್ ಮತ್ತು ಯುವರಾಜ್ ಸಿಂಗ್, ರೈನಾ ಸಾಹಸದಿಂದಾಗಿ 19.2 ಓವರ್‍ಗಳಲ್ಲಿ 142 ರನ್‍ಗಳಿಸುವ ಮೂಲಕ ಜಯಗಳಿಸಿತು.

ಬೌಲಿಂಗ್ ಪಿಚ್ ಆಗಿದ್ದ ಕಾರಣ ತಂಡದ ಮೊತ್ತ 16 ಆಗಿದ್ದಾಗ ಆರಂಭಿಕ ಬ್ಯಾಟ್ಸ್ ಮನ್‍ಗಳಿಬ್ಬರು ಪೆವಿಲಿಯನ್ ಸೇರಿದ್ದರು. ಈ ವೇಳೆ ಜೊತೆಯಾದ ರೈನಾ ಮತ್ತು ಕೊಹ್ಲಿ ಮೂರನೇ ವಿಕೆಟ್‍ಗೆ 47 ಎಸೆತಗಳಲ್ಲಿ 54 ರನ್ ಕೂಡಿಹಾಕುವ ಮೂಲಕ ಚೇತರಿಕೆ ಕಾರಣರಾದರು.

ತಂಡ ಮೊತ್ತ 70 ಆಗಿದ್ದಾಗ ಸುರೇಶ್ ರೈನಾ 25 ರನ್( 26 ಎಸೆತ, 2 ಬೌಂಡರಿ) ಸಿಡಿಸಿ ಔಟಾದರು. ನಂತರ ಬಂದ ಯುವರಾಜ್ ಆಕ್ರಮಣಕಾರಿ ಆಟ ಪ್ರದರ್ಶಿಸಿದರು. 35 ರನ್( 18 ಎಸೆತ, 3 ಬೌಂಡರಿ, 3 ಸಿಕ್ಸರ್) ಗಳಿಸಿದ್ದಾಗ ತಿಸ್ಸಾರ ಪೆರೆರ ಬೌಲಿಂಗ್‍ನಲ್ಲಿ ಸಿಕ್ಸರ್ ಬಾರಿಸಲು ಹೋಗಿ ಯುವರಾಜ್ ಕುಲಶೇಖರಗೆ ಕ್ಯಾಚ್ ನೀಡಿ ಹೊರನಡೆದರು. ಕೊನೆಯಲ್ಲಿ ಕೊಹ್ಲಿ ಬೌಂಡರಿ ಸಿಡಿಸಿ ಭಾರತಕ್ಕೆ ಜಯವನ್ನು ತಂದುಕೊಟ್ಟರು.

ಯಾರು ಎಷ್ಟು ರನ್?
ಶಿಖರ್ ಧವನ್ 1, ರೋಹಿತ್ ಶರ್ಮಾ 15, ವಿರಾಟ್ ಕೊಹ್ಲಿ ಅಜೇಯ 56 ಯುವರಾಜ್ ಸಿಂಗ್ 35, ಹಾರ್ದಿಕ್ ಪಾಂಡ್ಯಾ 1, ಧೋನಿ ಅಜೇಯ 7 ರನ್

ಯಾರಿಗೆ ಎಷ್ಟು ವಿಕೆಟ್?
ನುವನ್ ಕುಲಶೇಖರ 2 ವಿಕೆಟ್ ಪಡೆದರೆ, ತಿಸ್ಸಾರ ಪೆರೆರಾ, ರಂಗನ ಹೆರಾತ್, ದಸುನ್ ಶನಕ ತಲಾ 1 ವಿಕೆಟ್ ಪಡೆದರು.

ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ ಅಂತಿಮವಾಗಿ 20 ಓವರ್‍ಗಳಲ್ಲಿ 138 ರನ್ ಗಳಿಸಿತು. ಲಂಕಾ ಪರವಾಗಿ ಚಾಮರ ಕಪುಗೆಡೆರ 30( 32 ಎಸೆತ, 3 ಬೌಂಡರಿ),ತಿಲಕರತ್ನೆ ದಿನ್ಶಾನ್ 18, ಮಿಲಿಂದ ಸಿರಿವರ್ಧನ 22 ರನ್‍ಗಳಿಸಿದರೆ ಕೊನೆಯಲ್ಲಿ ತಿಸ್ಸಾರ ಪೆರೆರ 17 ರನ್(6 ಎಸೆತ, 2ಬೌಂಡರಿ,1 ಸಿಕ್ಸರ್) ಆಕ್ರಮಣಕಾರಿ ಆಟದಿಂದಾಗಿ 138 ರನ್‍ಗಳಿಸಿತು.

ಯಾರು ಎಷ್ಟು ರನ್?
ದಿನೇಶ್ ಚಂಡಿಮಲ್ 4, ತಿಲಕರತ್ನೆ ದಿನ್ಶಾನ್ 18 ಶೆಹಾನ ಜಯಸೂರ್ಯ 3, ಚಾಮರ ಕಪುಗೆಡೆರ 30, ಏಂಜೆಲೊ ಮ್ಯಾಥ್ಯೂಸ್ 18, ಮಿಲಿಂದ ಸಿರಿವರ್ಧನ 22, ದಸುನ್ ಶನಕ 1, ತಿಸ್ಸಾರ ಪೆರೆರ 17, ನುವಾನ್ ಕುಲಶೇಖರ 13, ದುಷ್ಮಂತ ಚಮೀರ ಔಟಾಗದೇ 02 ರನ್

ಯಾರಿಗೆ ಎಷ್ಟು ವಿಕೆಟ್?
ಜಸ್‍ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯಾ, ಅಶ್ವಿನ್ ತಲಾ 2 ವಿಕೆಟ್ ಪಡೆದರೆ, ಅಶಿಷ್ ನೆಹ್ರಾ 1 ವಿಕೆಟ್ ಪಡೆದರು.

ವಿರಾಟ್‍ಗೆ ಪ್ರಶಸ್ತಿ: ಈ ಪಂದ್ಯದಲ್ಲಿ 1 ರನೌಟ್ ಸೇರಿದಂತೆ ಅಜೇಯ 56 ರನ್( 47 ಎಸೆತ, 7 ಬೌಂಡರಿ) ಸಿಡಿಸಿದ ವಿರಾಟ್ ಕೊಹ್ಲಿ ಸತತ ಎರಡನೇ ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾರದರು.

9ನೇ ಬಾರಿ ಫೈನಲ್‍ಗೆ: ಗೆಈ ಪಂದ್ಯವನ್ನು ಜಯಿಸುವ ಮೂಲಕ ಭಾರತ 9ನೇ ಬಾರಿ ಏಷ್ಯಾ ಕಪ್ ಫೈನಲ್‍ಗೆ ಪ್ರವೇಶಿಸಿತು. ಭಾನುವಾರ ಮೀರ್ ಪುರ್ ನಲ್ಲೇ ಫೈನಲ್ ಮ್ಯಾಚ್ ನಡೆಯಲಿದೆ. ಇಲ್ಲಿಯವರೆಗೆ ಏಷ್ಯಾಕಪ್‍ನ್ನು 5 ಬಾರಿ ಭಾರತ ಜಯಗಳಿಸಿದ್ದು, ಮೂರರಲ್ಲಿ ರನ್ನರ್ ಅಪ್ ಸ್ಥಾನಗಳಿಸಿದೆ.

ಅಂಕಪಟ್ಟಿ ಹೇಗಿದೆ?
ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ 6 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ ಮೂರು ಪಂದ್ಯಗಳಲ್ಲಿ 2 ಪಂದ್ಯ ಗೆಲ್ಲುವ ಮೂಲಕ 4 ಅಂಕ ಗಳಿಸಿದೆ. ಪಾಕಿಸ್ತಾನ 2 ಪಂದ್ಯಗಳಲ್ಲಿ 1 ಪಂದ್ಯ ಗೆದ್ದಿದ್ದರೆ ಶ್ರೀಲಂಕಾ ಮೂರು ಪಂದ್ಯದಲ್ಲಿ 2 ಸೋತು, 1 ರಲ್ಲಿ ಗೆಲುವು ಸಾಧಿಸುವ ಮೂಲಕ ಪಾಕಿಸ್ತಾನದ ಜೊತೆ 2 ಅಂಕಗಳೊಂದಿಗೆ ಮೂರನೇ ಸ್ಥಾನ ಹಂಚಿಕೊಂಡಿದೆ.

Write A Comment