ರಾಷ್ಟ್ರೀಯ

ಮಹಿಷಾಸುರ ಜಯಂತಿ ಕುರಿತ ಚರ್ಚಾ ಕಾರ್ಯಕ್ರಮದ ನಿರೂಪಕಿಗೆ 1000 ಬೆದರಿಕೆ ಕರೆ

Pinterest LinkedIn Tumblr

Sindhu-Suryakumar

ತಿರುವನಂತಪುರಂ: ಮಹಿಷಾಸುರ ಜಯಂತಿ ಆಚರಣೆ ಕುರಿತು ಕಾರ್ಯಕ್ರಮವೊಂದನ್ನು ಸಮನ್ವಯ ಮಾಡಿದ್ದ ಏಶಿಯ ನೆಟ್ ನ್ಯೂಸ್ ನ ಮುಖ್ಯ ಸಂಯೋಜನಾ ಸಂಪಾದಕಿ ಸಿಂಧು ಸೂರ್ಯಕುಮಾರ್ ಅವರಿಗೆ ಬೆದರಿಗೆ ಕರೆಗಳು ಬಂದಿವೆ.

ಅದು ಒಂದಲ್ಲ ಎರಡಲ್ಲ ಸಾವಿರಾರು ಬೆದರಿಕೆ ಕರೆಗಳು ಬಂದಿದ್ದು, ಐಜಿ ಮನೋಜ್ ಅಬ್ರಹಾಂ ನೇತೃತ್ವದಲ್ಲಿ ತನಿಖಾ ತಂಡವನ್ನು ಕೇರಳ ಸರ್ಕಾರ ರಚಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ಕಾರ್ಯಕ್ರಮ ಕುರಿತಂತೆ ಕೆರಳಿದ ಸಂಘ ಪರಿವಾರದ ಬೆಂಬಲಿಗರು ಅವರಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ವಿದೇಶಗಳಿಂದಲೂ ಇಂತಹ ಕರೆಗಳು ಬಂದಿವೆ ಎಂದು ದಿ ನ್ಯೂಸ್ ಮಿನಿಟ್ ವೆಬ್ ಸೈಟ್ ವರದಿ ಮಾಡಿದೆ.

ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಂಸದ ಅಂತೋ ಅಂಟನಿ, ಸಿಪಿಎಂ ಸಂಸದ ಎಂಬಿ ರಾಜೇಶ್ ಹಾಗೂ ಬಿಜೆಪಿ ವಕ್ತಾರ ವಿವಿ ರಾಜೇಶ್ ಅವರು ಭಾಗವಹಿಸಿದ್ದು ಈ ಕಾರ್ಯಕ್ರಮದಲ್ಲಿ ಸಿಂಧು ಅವರಿಗೆ ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಸಿಂಧು ದುರ್ಗೆಯನ್ನು ಲೈಂಗಿಕ ಕಾರ್ಯಕರ್ತೆ ಎಂದು ಹೇಳಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ವಂದತಿ ಹರಡಿದ ಕಿಡಿಗೇಡಿಗಳು ಫೇಸ್ ಬುಕ್ ಹಾಗೂ ವಾಟ್ಸ್ ಆಪ್ ಗಳಲ್ಲಿ ಈ ಕುರಿತು ಸಿಂಧುವನ್ನು ಪ್ರಶ್ನಿಸುವಂತೆ ಆಕೆಯ ಮೊಬೈಲ್ ನಂಬರನ್ನೂ ನೀಡಿದ್ದರು.

Write A Comment