ಮನೋರಂಜನೆ

ಪ್ರಿಯಾಂಕ ಆಸ್ಕರ್‍ನಲ್ಲಿ ಧರಿಸಿದ್ದ ವಜ್ರದ ಆಭರಣಗಳ ಬೆಲೆ ಎಷ್ಟು ಗೊತ್ತಾ?

Pinterest LinkedIn Tumblr

PRIYANKA

ಲಾಸ್ ಏಂಜಲೀಸ್: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮೊದಲ ಬಾರಿಗೆ 88ನೇ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪಲ್ಗೊಂಡಿದ್ದರು. ಚೊಚ್ಚಲ ಆಸ್ಕರ್ ಕಾರ್ಯಕ್ರಮದಲ್ಲಿ ಪ್ರಿಯಾಂಕ ಡೈಮಂಡ್ ಜ್ಯುವೆಲ್ಲರಿಗಳ ಮೂಲಕ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ.

ಹೌದು. ಇದೇ ಮೊದಲ ಬಾರಿಗೆ ಆಸ್ಕರ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದ ಪ್ರಿಯಾಂಕ ವೈಟ್ ಝಹೈರ್ ಮುರ್ದದ್ ಸ್ಟ್ರಾರ್ಪ್‍ಲೆಸ್ ಗೌನ್ ಹಾಕಿ ಸ್ಟೇಜ್‍ನಲ್ಲಿ ಮಿಂಚಿದ್ದರು. ಅದರಲ್ಲೂ ಪ್ರಿಯಾಂಕ ತೊಟ್ಟಿದ್ದ ವಜ್ರದ ಓಲೆಗಳು ಹಾಗೂ ರಿಂಗ್ ಎಲ್ಲರ ಗಮನೆ ಸೆಳೆದಿದೆ. ಬರೋಬ್ಬರಿ 8 ಮಿಲಿಯನ್ ಡಾಲರ್(55 ಕೋಟಿ ರೂ.) ಮೌಲ್ಯದ 54 ಕ್ಯಾರೆಟ್ ವಜ್ರದ ಆಭರಣ ತೊಟ್ಟಿದ್ದರು ಎಂದರೇ ನಂಬಲೇಬೇಕು.

ಕಾರ್ಯಕ್ರಮದಲ್ಲಿ ಭಾರತೀಯ ಶೈಲಿಯಲ್ಲಿ ನಮಸ್ತೆ ಮಾಡುವ ಮೂಲಕ ಸ್ಟೇಜ್ ಹತ್ತಿದ್ದ ಪ್ರಿಯಾಂಕ, ಮ್ಯಾಡ್ ಮ್ಯಾಕ್ಸ್ ಫ್ಯೂರಿ ರೋಡ್ ಚಿತ್ರದ ಉತ್ತಮ ಸಂಕಲನಕ್ಕಾಗಿ ಮಾರ್ಗರೇಟ್ ಸಿಕ್ಸಲ್‍ಗೆ ಅತ್ಯುತ್ತಮ ಸಂಕಲನಗಾರ್ತಿ ಪ್ರಶಸ್ತಿಯನ್ನು ಪ್ರಿಯಾಂಕಾ ಚೋಪ್ರಾ ಪ್ರದಾನ ಮಾಡಿದರು.

Write A Comment