ರಾಷ್ಟ್ರೀಯ

ಸೆಕ್ಸ್ ವೀಡಿಯೋದಲ್ಲಿದ್ದಂತೆ ನಟಿಸ್ತಿಲ್ಲ ಎಂದು ಪತ್ನಿ ಮೇಲೆ ಹಲ್ಲೆ ಮಾಡ್ದ!

Pinterest LinkedIn Tumblr

crime

ಅಜ್ಮೇರ್: ಅವರಿಬ್ಬರದು 13 ವರ್ಷದ ದಾಂಪತ್ಯ. ಆದರೆ ಕಳೆದ ವರ್ಷ ಆತನ ಕೈಗೆ ಸ್ಮಾರ್ಟ್ ಫೋನ್ ಬಂತು. ಯಾವಾಗ ಆ ಪುಣ್ಯಾತ್ಮನ ಕೈಗೆ ಸ್ಮಾರ್ಟ್ ಫೋನ್ ಬಂತೋ ಆತನ ಹುಚ್ಚಾಟ, ಚಪಲಗಳು ಜಾಸ್ತಿಯಾಯ್ತು. ಆಸೆಗಳು ದುರಾಸೆಯಾಗಲು ಆರಂಭವಾಯ್ತು. ಹೆಂಡ್ತಿ ಸೆಕ್ಸ್ ವೀಡಿಯೋದಲ್ಲಿರುವಂತೆ ತನ್ನ ಜೊತೆ ನಡೆದುಕೊಳ್ಳುತ್ತಿಲ್ಲ ಎಂದು ಪತಿ ಮಹಾಶಯನೊಬ್ಬ ಪತ್ನಿ ಮೇಲೆ ಹಲ್ಲೆ ನಡೆಸಿದ ಘಟನೆ ಅಜ್ಮೇರ್‍ನಲ್ಲಿ ನಡೆದಿದೆ.

ಆಸ್ಪತ್ರೆಗೆ ದಾಖಲಾಗಿದ್ದ ಪತ್ನಿ ಪೊಲೀಸರ ಮುಂದೆ ಪತಿ ತನ್ನ ಮೇಲೆ ಹಲ್ಲೆ ನಡೆಸಲು ಕಾರಣವಾದ ಘಟನೆಯನ್ನು ವಿವರಿಸಿದ್ದಾಳೆ. ಮಹಿಳೆಯ ಸಂಬಂಧಿಕರು ನೀಡಿದ ದೂರಿನ ಆಧಾರದಲ್ಲಿ ಪತಿಯನ್ನು ಬಂಧಿಸಿ ಪೊಲೀಸರು ಜೈಲಿಗೆ ಕಳಿಸಿದ್ದಾರೆ.

ಮಹಿಳೆ ಪೊಲೀಸರ ಜೊತೆ ಏನ್ ಹೇಳಿದ್ಳು ಗೊತ್ತಾ?

ಕಳೆದ ಒಂದು ವರ್ಷದ ಹಿಂದಿನವರೆಗೆ ನನ್ ಗಂಡ ನನ್ ಜೊತೆ ಯಾವತ್ತೂ ಜಗಳವಾಡಿರಲಿಲ್ಲ. ಕಳೆದ ವರ್ಷ ಅವರು ಸ್ಮಾರ್ಟ್ ಫೋನ್ ಖರೀದಿಸಿದರು. ಇದಾದ ಬಳಿಕ ನನ್ನ ಜೀವನದಲ್ಲಿ ತಿರುವು ಪಡೆಯಿತು. ಕ್ಲಾತ್ ಪ್ರಿಂಟಿಂಗ್ ಅಂಗಡಿ ನಡೆಸುತ್ತಿದ್ದ ಪತಿ ಸೆಕ್ಸ್ ವೀಡಿಯೋಗಳನ್ನು ಡೌನ್‍ಲೋಡ್ ಮಾಡುತ್ತಿದ್ದ. ಇದನ್ನು ಮನೆಗೆ ತಂದು ನನಗೆ ತೋರಿಸಿ ಇದರಲ್ಲಿರುವಂತೆಯೇ ನಟಿಸು ಎನ್ನುತ್ತಿದ್ದ. ಆರಂಭದಲ್ಲಿ ನಾನು ಇದಕ್ಕೆ ಒಪ್ಪಿದೆನಾದರೂ, ಬಳಿಕ ನಾನು ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಆದರೆ ಆತ ತನ್ನ ವಿಕೃತ ಕಾಮಿಯ ಬುದ್ಧಿಯನ್ನು ಬಿಡಲಿಲ್ಲ.

ನನ್ನನ್ನು ಮಾನಸಿಕವಾಗಿ ಹಾಗೂ ದೈಹಿಕವಾಗಿ ಹಿಂಸೆ ನೀಡಿದ ನನ್ನ ಪತಿಗೆ ಶಿಕ್ಷೆಯಾಗಬೇಕು ಎಂದೊ ಒತ್ತಾಯಿಸಿದ್ದಾಳೆ. ಮಹಿಳೆಯ ಹೇಳಿಕೆಯ ಆಧಾರದಲ್ಲಿ ಪತಿಯನ್ನು ಬಂಧಿಸಿದರೂ ಆತ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ. ಸದ್ಯ ಆಕೆ ತನ್ನ ಸಹೋದರಿ ಜೊತೆಗೆ ತೆರಳಿದ್ದಾಳೆ. ಮದುವೆಯಾಗಿ 13 ವರ್ಷವಾಗಿದ್ದರೂ ದಂಪತಿಗೆ ಮಕ್ಕಳು ಹುಟ್ಟಿರಲಿಲ್ಲ.

Write A Comment