ನಾಗಪುರ (ಪಿಟಿಐ): ಶಾಲಾ ಬಾಲಕಿಯನ್ನು ಐವರು ಸೇರಿ ಸಾಮೂಹಿಕ ಆತ್ಯಾಚಾರ ಮಾಡಿರುವ ಘಟನೆ ನಾಗಪುರದಲ್ಲಿ ಭಾನುವಾರ ನಡೆದಿದೆ ಎಂದು ಸೋಮವಾರ ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಆತ್ಯಾಚಾರ ಎಸಗಿದ್ದಾರೆ. ಆತ್ಯಾಚಾರದ ಕೃತ್ಯವನ್ನು ಯಾರಿಗೂ ಹೇಳದಂತೆ ಬಾಲಕಿಗೆ ಬೆದರಿಕೆ ಹಾಕಿದ್ದಾರೆ. ಬಾಲಕಿ ಮನೆಗೆ ಬಂದ ಬಳಿಕ ಪೋಷಕರ ಬಳಿ ಘಟನೆಯನ್ನು ವಿವರಿಸಿದ್ದಾಳೆ. ವಿದ್ಯಾರ್ಥಿನಿಯ ಪೋಷಕರು ನಂದವನ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನಾಲ್ಕು ಮಂದಿ ಅಪ್ರಾಪ್ತರು: ಬಾಲಕಿಯ ಆತ್ಯಾಚಾರ ಎಸಗಿದವರನ್ನು ಬಂಧಿಸಲಾಗಿದ್ದು, ನಾಲ್ಕು ಮಂದಿ ಆರೋಪಿಗಳು ಅಪ್ರಾಪ್ತರು. 19 ವರ್ಷದ ರಾಹುಲ್ ನಾಮ್ದೇದ್ ವಾದೇವೆ ಮತ್ತು ನಾಲ್ವರು ಬಾಲಾರೋಪಿಗಳ ಮೇಲೆ ಪೋಸ್ಕೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.