ಮನೋರಂಜನೆ

ರಸೂಲ್ ಪೂಕುಟ್ಟಿಗೆ ಗೋಲ್ಡನ್ ರೀಲ್ ಪ್ರಶಸ್ತಿ; ನಿರ್ಭಯಾ ಘಟನೆ ಆಧಾರಿತ ಇಂಡಿಯಾಸ್ ಡಾಟರ್ ಸಾಕ್ಷ್ಯಚಿತ್ರದ ಧ್ವನಿ ವಿನ್ಯಾಸ ಪ್ರಶಸ್ತಿ

Pinterest LinkedIn Tumblr

resul pookutty

ಲಾಸ್‌ಏಂಜಲೀಸ್: ಆಸ್ಕರ್ ಪ್ರಶಸ್ತಿ ಪಡೆದ ‘ಸ್ಲಂ ಡಾಗ್ ಮಿಲೇನಿಯರ್‌’ ಚಿತ್ರದ ಖ್ಯಾತಿಯ ಧ್ವನಿ ತಜ್ಞ ರಸೂಲ್ ಪೂಕುಟ್ಟಿ ಅವರಿಗೆ ಸಿನಿಮಾ ಧ್ವನಿ ವಿನ್ಯಾಸಕ್ಕಾಗಿ ನೀಡುವ ಜಗತ್ತಿನ ಪ್ರತಿಷ್ಠಿತ ಗೋಲ್ಡನ್ ರೀಲ್ ಪ್ರಶಸ್ತಿ ಲಭಿಸಿದೆ.

ನವದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ನಿರ್ಭಯಾಳ ಕಥೆ ಹೇಳಿದ ಬಿಬಿಸಿ ಪ್ರಸ್ತುತ ಪಡಿಸಿದ ಇಂಡಿಯಾಸ್ ಡಾಟರ್ ಎಂಬ ಸಾಕ್ಷ್ಯಚಿತ್ರದ ಧ್ವನಿ ವಿನ್ಯಾಸಕ್ಕಾಗಿ, ಸಾಕ್ಷ್ಯಚಿತ್ರ ಶಬ್ದ ಸಂಯೋಜನೆ ವಿಭಾಗದಲ್ಲಿ ಪೂಕುಟ್ಟಿ ಅವರಿಗೆ 66ನೇ ವಾರ್ಷಿಕ ಗೋಲ್ಡನ್ ರೀಲ್ ಪ್ರಶಸ್ತಿ ಲಭಿಸಿದೆ. ಈ ಮೂಲಕ ಪ್ರಸ್ತುತ ಪ್ರಶಸ್ತಿ ಲಭಿಸಿದ ಏಷ್ಯಾದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಕೂಡಾ ಪೂಕುಟ್ಟಿ ಪಾಲಾಗಿದೆ.

ಆನ್‌ಫ್ರೀಡಂ ಎಂಬ ಚಿತ್ರಕ್ಕಾಗಿ ಪೂಕುಟ್ಟಿ ಹೆಸರು ನಾಮ ನಿರ್ದೇಶನ ಮಾಡಲಾಗಿತ್ತು. ಗೋಲ್ಡನ್ ರೀಲ್ ಪ್ರಶಸ್ತಿಗಾಗಿ ಎರಡು ಬಾರಿ ನಾಮ ನಿರ್ದೇಶನವಾಗಿದ್ದು ಇದೇ ಮೊದಲು. ಈ ಎರಡೂ ಸಾಕ್ಷ್ಯಚಿತ್ರಗಳನ್ನು ಭಾರತ ನಿಷೇಧಿಸಿತ್ತು. ಸಲಿಂಗಕಾಮವನ್ನು ಆಧರಿತ ಚಿತ್ರವಾಗಿದೆ ಅನ್‌ಫ್ರೀಡಂ.

ಈ ಹಿಂದೆ ರೋರ್ (Roar) ಎಂಬ ಹಿಂದಿ ಚಿತ್ರಕ್ಕಾಗಿ ಕಳೆದ ವರ್ಷವೂ ಪೂಕುಟ್ಟಿಯವರ ಹೆಸರು ಗೋಲ್ಡನ್ ರೀಲ್‌ಗಾಗಿ ನಾಮ ನಿರ್ದೇಶನಗೊಂಡಿತ್ತು.

Write A Comment