ಅಂತರಾಷ್ಟ್ರೀಯ

ಏಷ್ಯಾಕಪ್ ಟಿ20: ಪಾಕಿಸ್ತಾನ ವಿರುದ್ಧ ಭಾರತಕ್ಕೆ 5 ವಿಕೆಟ್ ಗಳ ಭರ್ಜರಿ ಜಯ; ಹಾರ್ಧಿಕ್ ಪಾಂಡ್ಯ ಮಾರಕ ಬೌಲಿಂಗ್, ಅರ್ಧ ಶತಕ ವಂಚಿತ ವಿರಾಟ್ ಕೊಹ್ಲಿ

Pinterest LinkedIn Tumblr

KOHLIWEB

ಮೀರ್ ಪುರ: ಮೀರ್ ಪುರದಲ್ಲಿ ನಡೆಯುತ್ತಿರುವ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್ ಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ.

ಪಾಕಿಸ್ತಾನ ನೀಡಿದ 84 ರನ್ ಗಳ ಅಲ್ಪ ಮೊತ್ತದ ಗುರಿಯನ್ನು ಬೆನ್ನು ಹತ್ತಿದ ಭಾರತ ತಂಡ 5 ವಿಕೆಟ್ ಗಳನ್ನು ಕಳೆದು ಕೊಂಡು 15.3 ಓವರ್ ಗಳಲ್ಲಿ ಮುಟ್ಟಿತು. ಆರಂಭಿಕ ಆಘಾತದ ಹೊರತಾಗಿಯೂ ವಿರಾಟ್ ಕೊಹ್ಲಿ ಮತ್ತು ಯುವರಾಜ್ ಸಿಂಗ್ ಜೋಡಿಯ ಅಮೋಘ ಆಟದ ನೆರವಿನಿಂದ ಭಾರತ 15.3 ಓವರ್ ಗಳಲ್ಲಿ 85 ರನ್ ಗಳಿಸುವ ಮೂಲಕ ಜಯ ಸಾಧಿಸಿತು. ಈ ನಡುವೆ ಭಾರತ ಗೆಲುವಿನ ಹೊಸ್ತಿಲಲ್ಲಿ ಇರುವಂತೆ 49 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಮಹಮದ್ ಸಮಿ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬೀಳುವ ಮೂಲಕ ಅರ್ಧ ಶತಕ ವಂಚಿತರಾದರು. ಆ ಬಳಿಕ ಬಂದ ಹಾರ್ದಿಕ್ ಪಾಂಡ್ಯ ಶೂನ್ಯಕ್ಕೆ ಔಟ್ ಆದರು. ಬಳಿಕ ಯುವರಾಜ್ ಸಿಂಗ್ (14 ರನ್) ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ (7 ರನ್) ಗೆಲುವಿನ ಔಪಚಾರಿಕತೆಯನ್ನು ಮುಗಿಸಿದರು.

_88479005_india_asiacup3jpg

dc-Cover-go6ud7a02702s7l4jhdu4m5n50-20160227212038.Medi

dc-Cover-go6ud7a02702s7l4jhdu4m5n50-20160227230509.Medi

ಇದಕ್ಕೂ ಮೊದಲು ಕೇವಲ 8 ರನ್ ಗಳ ಅಂತರದಲ್ಲಿ ಆರಂಭಿಕ 3 ವಿಕೆಟ್ ಗಳ ಪತನದೊಂದಿಗೆ ಭಾರತದ ಪಾಳಯದಲ್ಲಿ ಕೊಂಚ ಸೋಲಿನ ಭೀತಿ ಮೂಡಿತ್ತು. ಆದರೆ ಆ ಬಳಿಕ ಜೊತೆಗೂಡಿದ ವಿರಾಟ್ ಕೊಹ್ಲಿ ಮತ್ತು ಯುವರಾಜ್ ಸಿಂಗ್ ಜೋಡಿ ತಂಡವನ್ನು ಅಪಾಯದಿಂದ ಮೇಲೆತ್ತಿದರು. ಆಕರ್ಷಕ ಜೊತೆಯಾಟವಾಡಿದ ಈ ಜೋಡಿ ಭಾರತ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಯಶಸ್ವಿಯಾಯಿತು. ಆ ಮೂಲಕ ಭಾರತ ತಂಡ 15.3 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 85 ರನ್ ಗಳಿಸುವ ಮೂಲಕ ನಿರಾಯಾಸವಾಗಿ ಗುರಿ ಮುಟ್ಟಿತು.

ಇನ್ನು ಪಾಕಿಸ್ತಾನದ ಪರ ಮಹಮದ್ ಆಮಿರ್ 3 ವಿಕೆಟ್, ಮಹಮದ್ ಸಮಿ 2 ವಿಕೆಟ್ ಕಬಳಿಸಿದರು.
ಇದಕ್ಕೂ ಮೊದಲು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡ ಪಾಕಿಸ್ತಾನ ತಂಡವನ್ನು ಕೇವಲ 83 ರನ್ ಗಳಿಗೆ ಕಟ್ಟಿಹಾಕಿತು. ಭಾರತದ ಪರ ಪಾಂಡ್ಯ (3 ವಿಕೆಟ್) ಮತ್ತು ರವೀಂದ್ರ ಜಡೇಜಾ (2 ವಿಕೆಟ್) ಪ್ರಭಾವಿ ಬೌಲಿಂಗ್ ದಾಳಿ ಮಾಡುವ ಮೂಲಕ ಪಾಕಿಸ್ತಾನ ತಂಡದ ಪತನಕ್ಕೆ ಕಾರಣರಾದರು. ಪಾಕಿಸ್ತಾನದ ಪರ ಸರ್ಫರಾಜ್ ಅಹ್ಮದ್ ಗಳಿಸಿದ 25 ರನ್ ಗಳೇ ವೈಯುಕ್ತಿಕ ಅತ್ಯಧಿಕ ರನ್ ಗಳಿಕೆಯಾಗಿತ್ತು.

ಭಾರತದ ಕಳಪೆ ಆರಂಭ
ಪಾಕಿಸ್ತಾನ ನೀಡಿದ 84 ರನ್ ಗಳ ಅಲ್ಪ ಮೊತ್ತದ ಗುರಿ ಬೆನ್ನಟ್ಟಿದ ಭಾರತದ ಆರಂಭ ಕೂಡ ಕಳಪೆಯಾಗಿತ್ತು. ಕೇವಲ 8 ರನ್ ಸೇರಿಸುವಷ್ಟರಲ್ಲಿ ತಂಡದ ಪ್ರಮುಖ ಮೂರು ವಿಕೆಟ್ ಗಳು ಪತನವಾಗಿದ್ದವು. ಅದರಲ್ಲಿಯೂ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಅಜಿಂಕ್ಯಾ ರಹಾನೆ ಶೂನ್ಯಕ್ಕೆ ಔಟಾಗಿದ್ದು, ಭಾರತ ತಂಡಕ್ಕೆ ನುಂಗಲಾರದ ತುತ್ತಾಗಿತ್ತು.

ಟಿ20 ಮಾದರಿಯಲ್ಲಿಯೇ ಭಾರತದ ಕಳಪೆ ಆರಂಭ
ಇನ್ನು ಪಾಕಿಸ್ತಾನದ ವಿರುದ್ಧದ ಈ ಪಂದ್ಯದ ಭಾರತದ ಆರಂಭ ಟಿ20 ಮಾದರಿಯಲ್ಲಿಯೇ ಅತ್ಯಂತ ಕಳಪೆ ಆರಂಭವಾಗಿತ್ತು. ಪವರ್ ಪ್ಲೇ ಓವರ್ ಗಳಲ್ಲಿ ಭಾರತ ಪ್ರಮುಖ 3 ವಿಕೆಟ್ ಕಳೆದುಕೊಂಡು ಕೇವಲ 21 ರನ್ ಗಳಿಸಿತು. ಈ ಹಿಂದೆ 2010ರಲ್ಲಿ ನಡೆದಿದ್ದ ವಿಶ್ವಕಪ್ ಸರಣಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ಪವರ್ ಪ್ಲೇ ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 24 ರನ್ ಗಳಿಸಿತ್ತು. ಇದು ಭಾರತ ತಂಡದ ಈ ವರೆಗಿನ ಆರಂಭಿಕ ಕಳಪೆ ಪ್ರದರ್ಶನವಾಗಿತ್ತು. ಇಂದಿನ ಪಂದ್ಯ ಆ ದಾಖಲೆಯನ್ನು ಹಿಂದಿಕ್ಕಿದೆ.

2ನೇ ಬಾರಿ ಭಾರತದ ಆರಂಭಿಕರನ್ನು ಶೂನ್ಯಕ್ಕೆ ಔಟ್ ಮಾಡಿದ ಪಾಕ್
ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಪಾಕಿಸ್ತಾನ 2ನೇ ಬಾರಿಗೆ ಭಾರತದ ಆರಂಭಿಕ ಬ್ಯಾಟ್ಸಮನ್ ಗಳನ್ನು ಶೂನ್ಯಕ್ಕೆ ಔಟ್ ಮಾಡಿದೆ.

ಪ್ರಭಾವಿ ಬೌಲಿಂಗ್ ಮೂಲಕ ಪಾಕಿಸ್ತಾನದ ಬ್ಯಾಟಿಂಗ್ ವೈಫಲ್ಯಕ್ಕೆ ಕಾರಣರಾದ ಭಾರತದ ಪಾಂಡ್ಯ ಅರ್ಹವಾಗಿಯೇ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ: 17.3 ಓವರ್ ಗಳಲ್ಲಿ 83/10
ಸರ್ಫರಾಜ್ ಅಹ್ಮದ್ 25 ರನ್
ಖುರ್ರಮ್ ಮಂಝೂರ್ 10 ರನ್
ಬೌಲಿಂಗ್: ಪಾಂಡ್ಯಾ- 8 ರನ್ ಗೆ 3 ವಿಕೆಟ್, ರವೀಂದ್ರ ಜಡೇಜಾ 11 ರನ್ ಗೆ 2 ವಿಕೆಟ್, ನೆಹ್ರಾ, ಬುಮ್ರಾಹ್ ಮತ್ತು ಯುವರಾಜ್ ಸಿಂಗ್ ತಲಾ ಒಂದು ವಿಕೆಟ್
ಭಾರತ: 15.3 ಓವರ್ ಗಳಲ್ಲಿ 85/5
ವಿರಾಟ್ ಕೊಹ್ಲಿ 49 ರನ್
ಯುವರಾಜ್ ಸಿಂಗ್ ಅಜೇಯ 14 ರನ್
ಬೌಲಿಂಗ್: ಮಹಮದ್ ಆಮಿರ್ 18 ರನ್ ಗೆ 3 ವಿಕೆಟ್, ಮಹಮದ್ ಸಮಿ 16 ರನ್ ಗೆ 2 ವಿಕೆಟ್
ಪಂದ್ಯ ಪುರುಷೋತ್ತಮ: ವಿರಾಟ್ ಕೊಹ್ಲಿ

Write A Comment