ರಾಷ್ಟ್ರೀಯ

ಶಸ್ತ್ರರಹಿತ ಭಾರತ ಮಹಾತ್ಮಾ ಗಾಂಧಿ ಕನಸಾಗಿತ್ತು: ಜಪಾನ್ ಲೇಖಕ

Pinterest LinkedIn Tumblr

gandhiನವದೆಹಲಿ: ಮಹಾತ್ಮಾ ಗಾಂಧಿ ಅವರು ಸಶಸ್ತ್ರ ಭಾರತದ ಕನಸು ಕಂಡಿರಲಿಲ್ಲ, ಅವರದ್ದು ಶಸ್ತ್ರ ರಹಿತ ಭಾರತದ ಕನಸಾಗಿತ್ತು ಎಂದು ಜಪಾನ್ ಲೇಖಕ ಯಮಗುಚಿ ಹಿರೋಯ್ಚಿ ಹೇಳಿದ್ದಾರೆ.

ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗಾಂಧಿ ಇಂದಿಗೆ ಹೇಗೆ ಪ್ರಸ್ತುತ? ಜಪಾನ್ ನ ಒಂದು ದೃಷ್ಟಿಕೋನ (How Relevant is Gandhi Today? A Japanese Perspective ) ಎಂಬ ತಮ್ಮ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿರುವ ಯಮಗುಚಿ ಹಿರೋಯ್ಚಿ, 1904 -05 ರಲ್ಲಿ ನಡೆದ ರಷ್ಯಾ-ಜಪಾನಿನ ಯುದ್ಧದಿಂದ ಮಹಾತ್ಮಾ ಪ್ರಭಾವಿತರಾಗಿದ್ದರು. ರಷ್ಯಾದ ವಿರುದ್ಧ ಯುದ್ಧ ಗೆದ್ದ ನಂತರ ಜಪಾನ್ ಅತಿ ಹೆಚ್ಚು ಪ್ರಚಾರ ಪಡೆಯಿತು ಎಂದು ಯಮಗುಚಿ ಹೇಳಿದ್ದಾರೆ.

ಗಾಂಧಿ ಅವರು ತಮ್ಮ ಹಿಂದ್ ಸ್ವರಾಜ್ ನಲ್ಲಿ ಭವಿಷ್ಯದ ಭಾರತದ ಬಗ್ಗೆ ಸ್ಪಷ್ಟ ಕಲ್ಪನೆ ಹೊಂದಿದ್ದರು. ಜನಪ್ರಿಯ ಔದ್ಯಮಿಕ ದೇಶಗಳ ಮಿಲಿಟರಿ ಮತ್ತು ಆರ್ಥಿಕವಾಗಿ ಪ್ರಬಲ ಪರಿಕಲ್ಪನೆಗೆ ವಿರುದ್ಧವಾಗಿ ಭಾರತವನ್ನು ಅಭಿವೃದ್ಧಿಪಡಿಸಬೇಕೆಂಬುದು ಮಹಾತ್ಮಾ ಗಾಂಧಿ ಅವರ ಕನಸಾಗಿತ್ತು. ಮಿಲಿಟರಿ ಮತ್ತು ಆರ್ಥಿಕವಾಗಿ ಪ್ರಬಲ ಪರಿಕಲ್ಪನೆಗೆ ಮಧ್ಯದಲ್ಲಿರುವ ಪರಿಕಲ್ಪನೆಯನ್ನು ಮಹಾತ್ಮಾ ಗಾಂಧಿ ಹೊಂದಿದ್ದರು ಎಂದು ಯಮಗುಚಿ ಅಭಿಪ್ರಾಯಪಟ್ಟಿದ್ದಾರೆ.

Write A Comment