ರಾಷ್ಟ್ರೀಯ

ಕನ್ನಯ್ಯ ಪ್ರಕರಣ ವಿಚಾರಣೆಯನ್ನು ಬಿಜೆಪಿಯೇತರ ಸರ್ಕಾರವಿರುವ ಹೊರರಾಜ್ಯಕ್ಕೆ ವರ್ಗಾಯಿಸಿ : ಕಾಂಗ್ರೆಸ್ ಆಗ್ರಹ

Pinterest LinkedIn Tumblr

kanyaaನವದೆಹಲಿ, ಫೆ.27- ಜವಾಹರ್‌ಲಾಲ್ ನೆಹರು ವಿವಿ (ಜೆಎನ್‌ಯು)ದಲ್ಲಿನ ದೇಶದ್ರೋಹಿ ಘೋಷಣೆ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿರುವಂತೆಯೇ ವಿದ್ಯಾರ್ಥಿ ಸಂಘದ ನಾಯಕ ಕನ್ನಯ್ಯಕುಮಾರ್ ವಿಚಾರಣೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಅದಕ್ಕಾಗಿ ಪ್ರಕರಣವನ್ನು ಬಿಜೆಪಿಯೇತರ ಸರ್ಕಾರವಿರುವ ಹೊರರಾಜ್ಯಕ್ಕೆ ವರ್ಗಾಯಿಸಬೇಕು ಎಂದು ವಿರೋಧ ಪಕ್ಷ ಕಾಂಗ್ರೆಸ್ ಕೇಂದ್ರವನ್ನು ಆಗ್ರಹಿಸಿದೆ. ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ನಯ್ಯಕುಮಾರ್‌ನನ್ನು ಥಳಿಸಿದ ವಕೀಲರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು. ಕನ್ನಯ್ಯನ ಮೇಲಿನ ವಕೀಲರ ದಾಳಿ ವೇಳೆ ಪೊಲೀಸರು ಮನಸು ಮಾಡಿದ್ದರೆ ಆರೋಪಿಗಳನ್ನು ಬಂಧಿಸಬಹುದಿತ್ತು.

ಆದರೆ, ಅವರು ನಿಷ್ಕ್ರಿಯರಾಗಿದ್ದರು ಎಂದು ಕಾಂಗ್ರೆಸ್ ಆರೋಪಿಸಿದೆ. ಬಿಜೆಪಿ ಆಡಳಿತದಲ್ಲಿ ಕನ್ನಯ್ಯ ಮತ್ತು ಅವನ ಸಂಗಡಿಗರ ವಿಚಾರಣೆ ನಿಷ್ಪಕ್ಷಪಾತವಾಗಿ ನಡೆಯುವ ಬಗ್ಗೆ ನಂಬಿಕೆಯಿಲ್ಲ. ಹಾಗಾಗಿ ಪ್ರಕರಣವನ್ನು ಹೊರರಾಜ್ಯಕ್ಕೆ ವರ್ಗಾಯಿಸಿ ಎಂದು ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿದೆ. ಸದ್ಯ ತಿಹಾರ್ ಜೈಲಿನಲ್ಲಿರುವ ಕನ್ನಯ್ಯ ಕುಮಾರ್‌ಗೆ ವಿಶೇಷ ಭದ್ರತೆ ಒದಗಿಸಲಾಗಿದ್ದು, ದಿನದ 24 ಗಂಟೆಗಳ ಕಾಲವೂ ತೀವ್ರ ನಿಗಾ ವಹಿಸಲಾಗಿದೆ.

ನವದೆಹಲಿ, ಫೆ.27- ಜವಾಹರ್‌ಲಾಲ್ ನೆಹರು ವಿವಿ (ಜೆಎನ್‌ಯು)ದಲ್ಲಿನ ದೇಶದ್ರೋಹಿ ಘೋಷಣೆ ವಿಷಯಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿರುವಂತೆಯೇ ವಿದ್ಯಾರ್ಥಿ ಸಂಘದ ನಾಯಕ ಕನ್ನಯ್ಯಕುಮಾರ್ ವಿಚಾರಣೆ ನಿಷ್ಪಕ್ಷಪಾತವಾಗಿ ನಡೆಯಬೇಕು. ಅದಕ್ಕಾಗಿ ಪ್ರಕರಣವನ್ನು ಬಿಜೆಪಿಯೇತರ ಸರ್ಕಾರವಿರುವ ಹೊರರಾಜ್ಯಕ್ಕೆ ವರ್ಗಾಯಿಸಬೇಕು ಎಂದು ವಿರೋಧ ಪಕ್ಷ ಕಾಂಗ್ರೆಸ್ ಕೇಂದ್ರವನ್ನು ಆಗ್ರಹಿಸಿದೆ. ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ನಯ್ಯಕುಮಾರ್‌ನನ್ನು ಥಳಿಸಿದ ವಕೀಲರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಬೇಕು. ಕನ್ನಯ್ಯನ ಮೇಲಿನ ವಕೀಲರ ದಾಳಿ ವೇಳೆ ಪೊಲೀಸರು ಮನಸು ಮಾಡಿದ್ದರೆ ಆರೋಪಿಗಳನ್ನು ಬಂಧಿಸಬಹುದಿತ್ತು.

ಆದರೆ, ಅವರು ನಿಷ್ಕ್ರಿಯರಾಗಿದ್ದರು ಎಂದು ಕಾಂಗ್ರೆಸ್ ಆರೋಪಿಸಿದೆ. ಬಿಜೆಪಿ ಆಡಳಿತದಲ್ಲಿ ಕನ್ನಯ್ಯ ಮತ್ತು ಅವನ ಸಂಗಡಿಗರ ವಿಚಾರಣೆ ನಿಷ್ಪಕ್ಷಪಾತವಾಗಿ ನಡೆಯುವ ಬಗ್ಗೆ ನಂಬಿಕೆಯಿಲ್ಲ. ಹಾಗಾಗಿ ಪ್ರಕರಣವನ್ನು ಹೊರರಾಜ್ಯಕ್ಕೆ ವರ್ಗಾಯಿಸಿ ಎಂದು ಕಾಂಗ್ರೆಸ್ ಸರ್ಕಾರವನ್ನು ಒತ್ತಾಯಿಸಿದೆ. ಸದ್ಯ ತಿಹಾರ್ ಜೈಲಿನಲ್ಲಿರುವ ಕನ್ನಯ್ಯ ಕುಮಾರ್‌ಗೆ ವಿಶೇಷ ಭದ್ರತೆ ಒದಗಿಸಲಾಗಿದ್ದು, ದಿನದ 24 ಗಂಟೆಗಳ ಕಾಲವೂ ತೀವ್ರ ನಿಗಾ ವಹಿಸಲಾಗಿದೆ.

Write A Comment