ರಾಷ್ಟ್ರೀಯ

ಜೆಎನ್‌ಯು ವಿವಾದ: ಶರಣಾಗಿದ್ದ ವಿದ್ಯಾರ್ಥಿಗಳ ಬಂಧನ

Pinterest LinkedIn Tumblr

Anirban-and-Umarನವದೆಹಲಿ (ಪಿಟಿಐ): ಮಂಗಳವಾರ ರಾತ್ರಿ ಪೊಲೀಸರಿಗೆ ಶರಣಾಗಿದ್ದ ದೇಶದ್ರೋಹದ ಆರೋಪ ಎದುರಿಸುತ್ತಿರುವ ಜೆಎನ್‌ಯುವಿನ ಇಬ್ಬರು ವಿದ್ಯಾರ್ಥಿಗಳನ್ನು ಸತತ 5 ಗಂಟೆಗಳ ವಿಚಾರಣೆ ಬಳಿಕ ಬುಧವಾರ ನಸುಕಿನಲ್ಲಿ ಬಂಧಿಸಲಾಗಿದೆ.

ದೇಶದ್ರೋಹ ಆರೋಪ ಎದುರಿಸುತ್ತಿರುವ ಉಮರ್ ಖಾಲಿದ್ ಹಾಗೂ ಅನಿರ್ಬನ್ ಭಟ್ಟಾಚಾರ್ಯ ಅವರು ಮಂಗಳವಾರ ರಾತ್ರಿ ಪೊಲೀಸರಿಗೆ ಶರಣಾಗಿದ್ದರು.

‘ಬಂಧನಕ್ಕೂ ಮುನ್ನ ಅವರನ್ನು ಕನಿಷ್ಠ ಐದು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಗಿತ್ತು. ಈ ವೇಳೆ, ಎಲ್ಲಿ ತಲೆಮರಿಸಿಕೊಂಡಿದ್ದೀರಿ ಎಂಬುದು ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಶ್ನಿಸಲಾಗಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Write A Comment