ರಾಷ್ಟ್ರೀಯ

ಪಂಪೊರೆಯಲ್ಲಿ ಮುಂದುವರೆದ ಕಾರ್ಯಾಚರಣೆ: ​ಉಗ್ರರ ವಿರುದ್ಧ ನಿಲ್ಲದ ಕಾಳಗ: ಸೇನಾಧಿಕಾರಿ ಸಾವು

Pinterest LinkedIn Tumblr

CRPFಶ್ರೀನಗರ: ಸರ್ಕಾರಿ ಕಟ್ಟಡದಲ್ಲಿ ಶನಿವಾರ ರಾತ್ರಿ ಅಡಗಿದ್ದ ಉಗ್ರರ ವಿರುದ್ಧದ ಕಾರ್ಯಾಚರಣೆ ಭಾನುವಾರವೂ ಮುಂದುವರೆದಿದ್ದು, ಗುಂಡಿನ ಕಾಗಳದಲ್ಲಿ ಸೇನಾ ಅಧಿಕಾರಿಯೊಬ್ಬರು ಹುತಾತ್ಮರಾಗಿದ್ದಾರೆ.

ಇಲ್ಲಿನ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆಯ(ಇಡಿಐ) ಕಟ್ಟಡದಲ್ಲಿರುವ ಉಗ್ರರನ್ನು ಸೆದೆಬಡಿಯುವ ಕಾರ್ಯಾಚರಣೆಯಲ್ಲಿ ಕ್ಯಾಪ್ಟನ್‌ ಪವನ್ ಕುಮಾರ್ ಗಾಯಗೊಂಡಿದ್ದರು. ಬಳಿಕ ಅವರು ಮೃತಪಟ್ಟರು ಎಂದು ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪಂಪೊರೆಯ ಘಟನೆಯು ಜನವರಿ 2ರಂದು ನಡೆದ ಪಠಾಣ್‌ಕೋಟ್‌ ವಾಯುನೆಲೆ ಮೇಲಿನ ಉಗ್ರರ ದಾಳಿಯನ್ನು ನೆನಪಿಸುವಂತಿದೆ.

ಶ್ರೀನಗರ–ಜಮ್ಮು ರಾಷ್ಟ್ರೀಯ ಹೆದ್ದಾರಿಗೆ ಸಮೀಪದ ಪಂಪೊರೆಯಲ್ಲಿ ಶನಿವಾರ ಮಧ್ಯಾಹ್ನ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ(ಸಿಆರ್‌ಪಿಎಫ್‌) ಬೆಂಗಾವಲು ವಾಹನದ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ ಇಬ್ಬರು ಯೋಧರು ಸೇರಿದಂತೆ ಮೂವರು ಮೃತಪಟ್ಟಿದ್ದರು. ಘಟನೆಯಲ್ಲಿ ಒಂಬತ್ತು ಯೋಧರು ಗಾಯಗೊಂಡಿದ್ದರು.

ಬಳಿಕ ಭಯೋತ್ಪಾದಕರು ಸಮೀಪದಲ್ಲೇ ಇದ್ದ ಇಡಿಐ ಕಟ್ಟಡದಲ್ಲಿ ಅಡಗಿ ಆಶ್ರಯ ಪಡೆಯುವ ಮೂಲಕ ತೀವ್ರ ಆತಂಕ ಸೃಷ್ಟಿಸಿದ್ದರು.

ಕೂಡಲೇ ಎಚ್ಚತ್ತ ಭದ್ರತಾ ಸಿಬ್ಬಂದಿ, ಇಡಿಐ ಕಟ್ಟಡದಲ್ಲಿದ್ದ ವಿದ್ಯಾರ್ಥಿಗಳ, ಸಿಬ್ಬಂದಿ  ಹಾಗೂ ನಾಗರಿಕರು ಸೇರಿದಂತೆ 100ಕ್ಕೂ ಅಧಿಕ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ್ದರು. ಭಾನುವಾರವೂ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರೆದಿದೆ.

Write A Comment