ಹೈದರಾಬಾದ್: ಭ್ರಷ್ಟಾಚಾರ ವಿರೋಧಿ ಭಾರತ ಚಳವಳಿಯಿಂದ ಸಾಕಷ್ಟು ಹೆಸರು ಗಳಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಏನನ್ನು ಮಾಡಿಲ್ಲ ಎಂದು ಅವರ ಮಾಜಿ ಪ್ರಮುಖ ಸಹೋದ್ಯೋಗಿ, ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಹೇಳಿದ್ದಾರೆ.
ದೆಹಲಿಯಲ್ಲಿ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಬಗ್ಗೆ ಪ್ರತಿಕ್ರಿಯಿಸಿದ ಸಂತೋಷ್ ಹೆಗ್ಡೆ, ಭ್ರಷ್ಟಾಚಾರ ನಿಯಂತ್ರಣ ಅವರ ಪ್ರಮುಖ ಉದ್ದೇಶವಾಗಬೇಕಿತ್ತು. ಆದರೆ ಅದಕ್ಕೆ ಸಂಬಂಧಿಸಿದ ಯಾವುದೇ ಕ್ರಮಗಳು ನನಗೆ ಕಾಣಿಸುತ್ತಿಲ್ಲ ಎಂದರು.
ಕೇಜ್ರಿವಾಲ್ ಅವರ ಆಡಳಿತದ ಬಗ್ಗೆ, ವಿಶೇಷವಾಗಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ನನಗೆ ತೃಪ್ತಿ ಇಲ್ಲ ಎಂದು ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ದೆಹಲಿ ಮುಖ್ಯಮಂತ್ರಿಯೊಬ್ಬರು ರಾಜ್ ಪತ್ ನಲ್ಲಿ ಧರಣಿ ಮಾಡುತ್ತಾರೆ. ಅವರು ಇನ್ನೂ ಪ್ರತಿಪಕ್ಷದಲ್ಲಿದ್ದಾರೆ ಅಂದುಕೊಂಡಿದ್ದಾರೆ. ಅಲ್ಲದೆ ಇನ್ನೂ ಧರಣಿ ಮಾಡುವ ಮೂಡ್ ನಲ್ಲಿದ್ದಾರೆ ಎಂದಿರುವ ಮಾಜಿ ಲೋಕಾಯುಕ್ತರು, ಕೇಜ್ರಿವಾಲ್ ಅವರಿಗೆ ಆಡಳಿತಾತ್ಮಕ ಅನಭವದ ಕೊರತೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.