ನವದೆಹಲಿ: ಪ್ರವಾಹ ಸಂತ್ರಸ್ತರಿಗೆ ನೀಡುವ ಎಲ್ಲಾ ವಸ್ತುಗಳ ಮೇಲೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಫೋಟೋ ಹಾಕಿ ನೀಡಿದ್ದ ಬೆಂಬಲಿಗರು ಸಿಯಾಚಿನ್ ದುರಂತದಲ್ಲಿ ಹುತಾತ್ಮರಾದ ಯೋಧರ ಶವ ಪೆಟ್ಟಿಗೆ ಮೇಲೂ ಜಯಲಲಿತಾ ಫೋಟೋ ಹಾಕಿ ಅಮ್ಮನ ಕೃಪೆಗೆ ಪಾತ್ರರಾಗಲು ಯತ್ನಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸಿಯಾಚಿನ್ ನಲ್ಲಿ ಮಡಿದ ಮಧುರೈನ ಗಣೇಶನ್ ಅವರ ಕುಟುಂಬಕ್ಕೆ ತಮಿಳು ನಾಡು ಸರ್ಕಾರ 10 ಲಕ್ಷ ರೂಪಾಯಿ ಚೆಕ್ ನೀಡಿದೆ. ಈ ವೇಳೆ ಜಯಲಲಿತಾ ಸಂಪುಟದ ಸಹಕಾರ ಸಚಿವ ಕೆ. ರಾಜು ಮೃತ ಯೋಧನ ಶವ ಪೆಟ್ಟಿಗೆ ಮುಂಭಾಗ ಮುಖ್ಯಮಂತ್ರಿ ಜಯಲಲಿತಾ ಫೋಟೋ ಇಟ್ಟು ಚೆಕ್ ನೀಡಿ. ಕ್ಯಾಮೆರಾಗಳಿಗೆ ಪೋಸ್ ಕೊಟ್ಟಿದ್ದಾರೆ.
ಮಗನನ್ನು ಕಳೆದು ಕೊಂಡ ದುಃಖದಲ್ಲಿದ್ದ ತಾಯಿ ಕೈ ಗೆ ಜಯಲಲಿತಾ ಭಾವಚಿತ್ರ ನೀಡಿ ಫೋಟೋ ತೆಗೆಸಿಕೊಂಡಿರುವ ಚಿತ್ರ ಸಾಮಾಜಿಕ ಜಾಲತಾಗಳಲ್ಲಿ ವೈರಲ್ ಆಗಿದ್ದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಈ ಬಗ್ಗೆ ಸಚಿವ ರಾಜು ಅವರನ್ನು ಕೇಳಿದರೇ, ಮೃತ ಯೋಧನ ಕುಟುಂಬಕ್ಕೆ ಯಾವ ಸರ್ಕಾರ ಪರಿಹಾರ ಧನ ನೀಡಿತು ಎಂಬುದು ಜನರಿಗೆ ತಿಳಿಯಬೇಕು ಎಂಬ ಉದ್ದೇಶದಿಂದ ಈ ರೀತಿ ಮಾಡಲಾಯಿತು ಎಂದು ಹೇಳಿದ್ದಾರೆ.