ನವದೆಹಲಿ, ಫೆ.17- ದೆಹಲಿಯ ಜೆಎನ್‌ಯು ವಿಶ್ವವಿದ್ಯಾನಿಲಯದಲ್ಲಿ ನಡೆದ ಕಾರ್ಯಕ್ರಮದ ಮಾದರಿಯಲ್ಲಿ ದೇಶದ ಇತರ 18ವಿಶ್ವವಿದ್ಯಾನಿಲಯಗಳಲ್ಲಿ ಅಪ್ಜಲ್ ಗುರು ಪರವಾಗಿ ಕಾರ್ಯಕ್ರಮ ನಡೆಸಲು ತಯಾರಿ ನಡೆಸಲಾಗಿತ್ತು ಎನ್ನಲಾಗಿದೆ.
ಡೆಮಾಕ್ರಟಿಕ್ ಸ್ಟೂಡೆಂಟ್ಸ್ ನಾಯಕನಾದ ಉಮಾರ್ ಖಾಲಿದ್ ಜಮ್ಮು ಕಾಶ್ಮೀರದ ಕೆಲವು ಸಂಘಟನೆಗಳೊಂದಿಗೆ ನಿಕಟ ಸಂಪರ್ಕ ಒಂದಿದ್ದು, ನೇಣಿ ಗೇರಿರುವ ಅಪ್ಜಲ್ ಗುರು ಪರವಾಗಿ ದೇಶದ ಇತರ ವಿಶ್ವವಿದ್ಯಾಲಯಗಳಲಿ ವಿಚಾರ ಸಂಕಿರಣ ನಡೆಸುವ ಸಿದ್ದತೆಯಲ್ಲಿದ್ದ. ಇದಕ್ಕಾಗಿ ತನ್ನ ಬೆಂಬಲಿಗರನ್ನು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯ, ಅಲಹಬಾದ್ ವಿಶ್ವವಿದ್ಯಾನಿಲಯ ಸೇರಿದಂತೆ 18ವಿಶ್ವವಿದ್ಯಾನಿಯಲಗಳಿಗೆ ಕಳುಹಿಸಿ ಪರಿಸ್ಥಿತಿಯನ್ನು ಅವಲೋಕಿಸಲಾಗಿದೆ ಎನ್ನಲಾಗಿದೆ.
ದೆಹಲಿ ಜೆಎನ್‌ಯು ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮ ನಡೆಯುವ ಮುನ್ನ ಫೆ.7ರಂದು ಕಾಶ್ಮೀರದಿಂದ ಆಗಮಿಸದ 10ಮಂದಿ ಪ್ರತ್ಯೇಕತಾ ವಾದಿಗಳು ವಿಶ್ವವಿದ್ಯಾನಿಲಯದ ಆವರ ಪ್ರವೇಶಿದ ಅವರು ಅಪ್ಜಲ್‌ಗುರು ಪರವಾಗಿ ಘೋಷಣೆಗಳನ್ನು ಕೂಗಿದರು ಎಂದು ಹೇಳಲಾಗಿದೆ.