ರಾಷ್ಟ್ರೀಯ

ಅಚ್ಚರಿಯೇ… ಪುರುಷ ಪೊಲೀಸರಿಂದ ಮಹಿಳಾ ಅಭ್ಯರ್ಥಿಗಳ ದೈಹಿಕ ಟೆಸ್ಟ್!

Pinterest LinkedIn Tumblr

Cops-700ಜೈಪುರ : ರಾಜಸ್ಥಾನದ ಚಿತ್ತೂರ್‌ಗಢ ಪ್ರದೇಶದಲ್ಲಿ ಪುರುಷ ಪೊಲೀಸ್‌ ಸಿಬಂದಿಗಳು ಬುಧವಾರ ಮಹಿಳಾ ಅಭ್ಯರ್ಥಿಗಳ ದೈಹಿಕ ಪರೀಕ್ಷೆಯನ್ನು ತೆಗೆದುಕೊಳ್ಳುವ ಆಶ್ಚರ್ಯಕರ ವಿಡಿಯೋ ಚಿತ್ರಿಕೆಗಳು ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿವೆ.

ಈ ಮಹಿಳಾ ಅಭ್ಯರ್ಥಿಗಳು ರಾಜಸ್ಥಾನ ಅರಣ್ಯ ಇಲಾಖೆಯ ಲಿಖೀತ ಪರೀಕ್ಷೆಯನ್ನು ಪಾಸು ಮಾಡಿಕೊಂಡವರು. ಇವರ ನೇಮಕಾತಿಗೆ ಸಂಬಂಧಿಸಿದಂತೆ ಪುರುಷ ಪೊಲೀಸ್‌ ಸಿಬಂದಿಗಳು ಈ ಮಹಿಳಾ ಅಭ್ಯರ್ಥಿಗಳ ದೇಹದ ಎತ್ತರ, ಎದೆಯ ಸುತ್ತಳತೆ ಇತ್ಯಾದಿಗಳನ್ನು ತೆಗೆದುಕೊಂಡರು. ಮಹಿಳಾ ಕಾನ್‌ಸ್ಟೆಬಲ್‌ಗ‌ಳು ಈ ಸಂದರ್ಭದಲ್ಲಿ ಕೇವಲ ಉಪಸ್ಥಿತರಿದ್ದರೇ ಹೊರತು ಮಹಿಳಾ ಅಭ್ಯರ್ಥಿಗಳ ದೈಹಿಕ ಪರೀಕ್ಷೆಯನ್ನು ನಿಯಮಾನುಸಾರ ತಾವೇ ತೆಗೆದುಕೊಳ್ಳಲು ಮುಂದಾಗಲಿಲ್ಲ. ಹಿರಿಯ ಪುರುಷ ಪೊಲೀಸ್‌ ಅಧಿಕಾರಿಗಳು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸುಮಾರು 1,512 ಮಹಿಳಾ ಅಭ್ಯರ್ಥಿಗಳು ಲಿಖೀತ ಪರೀಕ್ಷೆಯನ್ನು ಪಾಸು ಮಾಡಿಕೊಂಡಿದ್ದಾರೆ. ದೈಹಿಕ ಪರೀಕ್ಷೆ ತೆಗೆದುಕೊಳ್ಳುತ್ತಿರುವ ಪುರುಷ ಪೊಲೀಸ್‌ ಸಿಬಂದಿಗಳು ಮಹಿಳಾ ಅಭ್ಯರ್ಥಿಗಳ ಎದೆಯಳತೆ ತೆಗೆದುಕೊಳ್ಳಲು ಆಳವಾದ ಉಸಿರನ್ನು ತೆಗೆದುಕೊಂಡು ಎದೆಯುಬ್ಬಿಸುವಂತೆ ಸೂಚಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತದೆ.

ಮಹಿಳಾ ಅಭ್ಯರ್ಥಿಗಳ ದೈಹಿಕ ಪರೀಕ್ಷೆಯನ್ನು ಪುರುಷ ಪೊಲೀಸ್‌ ಸಿಬಂದಿಗಳು ತೆಗೆದುಕೊಂಡು ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳಲಾಗುವುದೆಂದು ರಾಜಸ್ಥಾನದ ಅರಣ್ಯ ಸಚಿವ ರಾಜ್‌ಕುಮಾರ್‌ ರಿನ್ವಾ ಮಾಧ್ಯಮಕ್ಕೆ ತಿಳಿಸಿದ್ದಾರೆ.
-ಉದಯವಾಣಿ

Write A Comment