ರಾಷ್ಟ್ರೀಯ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಶೇ.6ರಷ್ಟು ಏರಿಕೆ ಕಂಡ ಕಚ್ಛಾತೈಲ ಬೆಲೆ

Pinterest LinkedIn Tumblr

marketನವದೆಹಲಿ, ಫೆ.12- ಯುಎಇ ಇಂಧನ ಸಚಿವರು ಕಚ್ಛಾ ತೈಲ ಉತ್ಪಾದನೆಯನ್ನು ಕಡಿತ ಮಾಡುವ ಹೇಳಿಕೆ ನೀಡಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಶೇ.6ರಷ್ಟು ಜಿಗಿದಿದೆ. 2003ರ ನಂತರ ದಾಖಲೆಯ ಪ್ರಮಾಣದಲ್ಲಿ ಕುಸಿತ ಕಂಡಿದ್ದ ಇಂಧನ ಬೆಲೆ ಇದೇ ಮೊದಲ ಬಾರಿಗೆ ಚೇತರಿಕೆಯ ಹಾದಿಯಲ್ಲಿದ್ದು, ಒಪೆಕ್(ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಒಕ್ಕೂಟ ) ರಾಷ್ಟ್ರಗಳಲ್ಲಿ ಹರ್ಷ ಮೂಡಿಸಿದೆ. ಅದೇ ಸಮಯಕ್ಕೆ ಒಪೆಕ್ ಹೊರತಾದ ದೇಶಗಳಲ್ಲಿ ಆತಂಕದ ಛಾಯೆ ಮೂಡಿದೆ. ಕಚ್ಛಾ ತೈಲದ ಅಗತ್ಯಮಿತಿ ಉತ್ಪಾದನೆಯಿಂದಾಗಿ ಅತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಪ್ರತಿ ಬ್ಯಾರೆಲ್ ಬೆಲೆ 27.73 ಡಾಲರ್‌ಗೆ ಕುಸಿದಿತ್ತು.
ಇದನ್ನು ಅರಿತ ಅರಬ್ಬ್ ಆಡಳಿತ ತೈಲ ಉತ್ಪಾದನೆಯನ್ನು ಕಡಿಮೆ ಮಾಡುವುದಾಗಿ ಹೇಳಿದೆ. ಇದರಿಂದ ನಿನ್ನೆ ಶೇ.5.8ರಷ್ಟು ಬ್ಯಾರೆಲ್ ದರ ಹೆಚ್ಚಾಗಿದ್ದು, ದಿನದ ವಹಿವಾಟು ಅಂತ್ಯಕ್ಕೆ 31.80ಡಾಲರ್ ವಿಕ್ರಯವಾಗಿದೆ.
ಕಳೆದ 2014ರಿಂದೀಚೆಗೆ ಕಚ್ಛಾ ತೈಲ ಬೆಲೆ ಕಡಿಮೆಯಾಗಲಾರಂಭಿಸಿತು. ಶೇ.70ರಷ್ಟು ಕುಸಿದಿದೆ. ಪ್ರತಿ ದಿನ ಸುಮಾರು ಎರಡು ಮಿಲಿಯನ್ ಬ್ಯಾರೆಲ್ ಕಚ್ಛಾತೈಲ ಉತ್ಪಾದನೆಯಾಗುತ್ತಿದ್ದು, ಇದರಲ್ಲಿ ಕಡಿತ ಮಾಡಿದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಸುಸ್ಥಿತಿಗೆ ಬರುವ ನಿರೀಕ್ಷೆಯನ್ನು ಒಪೆಕ್ ರಾಷ್ಟ್ರಗಳು ವ್ಯಕ್ತಪಡಿಸಿವೆ.

Write A Comment