ಛತ್ತೀಸ್ ಘಡ: ಹಿರಿಯ ಜಡ್ಜ್ ವೊಬ್ಬರ ಮನೆಯ ಮುಂದಿನ ತೋಟದಲ್ಲಿ ಬೆಳೆದಿದ್ದ ಗಿಡವನ್ನು ತಿಂದ ಮೇಕೆಯನ್ನು ಬಂಧಿಸಿರುವ ಘಟನೆ ಛತ್ತೀಸ್ ಘಡದಲ್ಲಿ ನಡೆದಿದೆ.
ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಹೇಮಂತ್ ರಾತ್ರೆ ಅವರ ಹೂದೋಟದಲ್ಲಿ ಮೇಕೆ ಪದೇ ಪದೇ ಹೋಗಿ ಗಿಡಗಳನ್ನು ಮೇಯ್ದು ಬರುತ್ತಿತ್ತು. ಹೀಗಾಗಿ ಮೇಕೆ ಮತ್ತು ಆತನ ಮಾಲೀಕ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಇಂದು ನ್ಯಾಯಾಧಿಶರ ಮುಂದೆ ಹಾಜರು ಪಡಿಸಿದ ಮೇಲೆ ಮೇಕೆ ಮತ್ತು ಆತನ ಮಾಲೀಕ ಅಬ್ದುಲ್ ಹಸನ್ ನನ್ನು ಬಿಡುಗಡೆ ಮಾಡಲಾಗಿದೆ. ಜಡ್ಜ್ ಮನೆಯ ಮುಂದೆ ಕಬ್ಬಿಣದ ಗೇಟ್ ಇದೆ. ಆ ಗೇಟ್ ಜಂಪ್ ಮಾಡಿ ಮೇಕೆ ಪದೇ ಪದೇ ಹೋಗಿ ಗಿಡಗಳನ್ನು ತಿಂದು ನಾಶ ಮಾಡಿದೆ ಎಂದು ಸಬ್ ಇನ್ಸ್್ ಪೆಕ್ಟರ್ ಆರ್.ಪಿ ಶ್ರೀವಾತ್ಸವ ತಿಳಿಸಿದ್ದಾರೆ.
ಜಡ್ಜ್ ಮನೆಯ ಮುಂದಿನ ಗೇಟು ಹಾರಿ ತನ್ನ ಮೇಕೆ, ಹೂವಿನ ಗಿಡ ಹಾಗೂ ತರಕಾರಿಗಳನ್ನು ತಿಂದು ಬಂದಿದೆ ಎಂಬ ಆರೋಪದಲ್ಲಿ ನನ್ನ ಹಾಗೂ ಮೇಕೆಯ ವಿರುದ್ಧ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆಂದು ಮೇಕೆ ಮಾಲೀಕ ಅಬ್ದುಲ್ ಹಸನ್ ಹೇಳಿದ್ದಾರೆ.