
ನ್ಯೂಯಾರ್ಕ್: ರಕ್ತ ಪರೀಕ್ಷೆ ಮೂಲಕ ಐದು ಮಾದರಿಯ ಕ್ಯಾನ್ಸರ್ಗಳನ್ನು ಆರಂಭದ ಹಂತದಲ್ಲೇ ಪತ್ತೆ ಮಾಡುವ ವಿನೂತನ ವಿಧಾನವನ್ನು ಅಮೆರಿಕದ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಇದರಿಂದ ಕ್ಯಾನ್ಸರ್ ಪತ್ತೆಗೆ ಬಯಾಪ್ಸಿ ನಡೆಸುವ ಅಗತ್ಯ ಇರುವುದಿಲ್ಲ.
ನ್ಯಾಷನಲ್ ಹ್ಯೂಮನ್ ಜೆನೋಮ್ ರೀಸರ್ಚ್ ಇನ್ಸ್ ಟಿಟ್ಯೂಟ್ ಸಂಶೋಧಕರ ಈ ಪ್ರಯೋಗ ಯಶಸ್ವಿಯಾಗಿದ್ದು, ಸ್ತನ, ಕರುಳು, ಶ್ವಾಸಕೋಶ, ಭ್ರೂಣ ಮತ್ತು ಜಠರ ಕ್ಯಾನ್ಸರ್ಗಳನ್ನು ಆರಂಭದ ಹಂತದಲ್ಲೇ ಕಂಡುಹಿಡಿಯಬಹುದಾಗಿದೆ. ರೋಗದ ವಿರುದ್ಧ ಹೋರಾಡುವ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಂತೆಯೇ ದೇಹದಲ್ಲಿ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಕ್ಯಾನ್ಸರ್ ಗಡ್ಡೆಗಳು ಕಂಡು ಬರುತ್ತಿದ್ದಂತೆಯೇ ವಂಶವಾಹಿಯಲ್ಲಿ ಮೆಥಿಲೇಶನ್ನ ಅಂಶ ಕಂಡುಬರುತ್ತದೆ. ಈ ಪರೀಕ್ಷೆಯಿಂದ ಕ್ಯಾನ್ಸರ್ ಇರುವಿಕೆ ಪತ್ತೆಯಾಗುತ್ತಿದ್ದಂತೆಯೇ ಚಿಕಿತ್ಸೆ ನೀಡಿದರೆ ಸಂಪೂರ್ಣ ಗುಣವಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.