ಅಂತರಾಷ್ಟ್ರೀಯ

ಯೋಗದಿಂದ 104 ಕೆಜಿ ಇಳಿಸಿಕೊಂಡಳು!

Pinterest LinkedIn Tumblr

yogaaaa

ಯೋಗಾಭ್ಯಾಸ ವಿದೇಶದಲ್ಲೂ ಜನಪ್ರಿಯವಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಬೊಜ್ಜಿನ ಸಮಸ್ಯೆ ಹೊಂದಿರುವ ವ್ಯಕ್ತಿಗಳೂ ಯೋಗದ ಮೂಲಕ ತೂಕ ಇಳಿಸಿಕೊಳ್ಳಬಹುದು ಎಂಬುದನ್ನು ಅಮೆರಿಕದ ಪೆನ್ಸಿಲ್ವೇನಿಯಾದ ಮಹಿಳೆ ಸಾಬೀತುಪಡಿಸಿದ್ದಾಳೆ.

22 ವರ್ಷದ ಡಾನಾ ಹೋಪ್ ಯೋಗ ಆರಂಭಿಸುವಾಗ ಬರೋಬ್ಬರಿ 136 ಕಿಲೋ ಇದ್ದಳು. ನಿರಂತರ ಅಭ್ಯಾಸದಿಂದಾಗಿ ಈಗ ಭಾರ 32 ಕಿಲೋಗೆ ಇಳಿದಿದೆ! ಇದಕ್ಕಾಗಿ ಯೋಗ ತರಬೇತುದಾರಿಗೆ ಡಾನಾ ಧನ್ಯವಾದ ಹೇಳಿದ್ದಾರೆ. ಸಾಮಾಜಿಕ ಜಾಲತಾಣ ಇನ್​ಸ್ಟ್ರಾಗ್ರಾಮ್ಲ್ಲಿ ಡಾನಾ ತನ್ನ ಯೋಗಾಭ್ಯಾಸ ಕುರಿತ ಚಿತ್ರಗಳನ್ನು ಅಪ್​ಲೋಡ್ ಮಾಡಿದ್ದು, 79 ಸಾವಿರಕ್ಕೂ ಹೆಚ್ಚು ಜನರು ಇದನ್ನು ಲೈಕ್ ಮಾಡಿದ್ದಾರೆ.

ಡಾನಾ ಹೇಳಿದ್ದೇನು?

ಬೊಜ್ಜಿನ ಸಮಸ್ಯೆಯಿಂದಾಗಿ ಜೀವನದಲ್ಲಿ ಜಿಗುಪ್ಸೆ ಹುಟ್ಟಿತ್ತು. ಯಾರೊಂದಿಗೂ ಬೆರೆಯುತ್ತಿರಲಿಲ್ಲ. ತೂಕ ಇಳಿಸಲು ಹಲವು ಚಿಕಿತ್ಸೆ, ವ್ಯಾಯಾಮ ಮಾಡಿದರೂ ಪ್ರಯೋಜನವಾಗಲಿಲ್ಲ. ನಂತರ ಯೋಗ ಬಗ್ಗೆ ಆಸಕ್ತಿ ಹುಟ್ಟಿತು. ಆದರೆ ಶೀರ್ಷಾಸನ ಸೇರಿ ಕ್ಲಿಷ್ಟಕರ ಆಸನಗಳನ್ನು ಮಾಡುವುದು ಅಸಾಧ್ಯವಾಗಿತ್ತು. ಕೈ-ಕಾಲುಗಳನ್ನು ಹೊರಳಿಸಲೂ ಕಷ್ಟಪಡುವ ಸ್ಥಿತಿ ಇತ್ತು. ಹಂತ ಹಂತವಾಗಿ ಯೋಗಾಭ್ಯಾಸ ಮಾಡಿದೆ. ತೂಕ 100 ಕಿಲೋಗೂ ಹೆಚ್ಚು ಕಡಿಮೆಯಾಯಿತು. ಯೋಗದಿಂದ ಮಾನಸಿಕವಾಗಿ ನೆಮ್ಮದಿ ಹಾಗೂ ದೃಢತೆ ಸಿಕ್ಕಿದೆ ಎಂದು ಡಾನಾ ಇನ್​ಸ್ಟಾಗ್ರಾಮ್ಲ್ಲಿ ಬರೆದುಕೊಂಡಿದ್ದಾಳೆ.

Write A Comment