ಗಲ್ಫ್

ಫೆ.18-19ರಂದು ದುಬೈಯಲ್ಲಿ ನಡೆಯಲಿದೆ ‘ಗಲ್ಫ್ ಚಾಂಪಿಯನ್ಸ್ ಲೀಗ್ 2016’ ಅದ್ದೂರಿ ಕ್ರಿಕೆಟ್ ಪಂದ್ಯಾಟ: ಗಲ್ಫ್-ಭಾರತದ ಒಟ್ಟು 16 ತಂಡಗಳು ಭಾಗಿ

Pinterest LinkedIn Tumblr

IMG-20160207-WA0068

ದುಬೈ, ಫೆ.9: ಗಲ್ಫ್ ಸ್ಪೋರ್ಟ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್‌ಆಶ್ರಯದಲ್ಲಿ ದುಬೈ ಇತಿಹಾಸದಲ್ಲಿಯೇ ಮೊತ್ತ ಮೊದಲ ಬಾರಿಗೆ ಗಲ್ಫ್ ಚಾಂಪಿಯನ್ಸ್ ಲೀಗ್ 2016 ಕ್ರಿಕೆಟ್ ಪಂದ್ಯಾಟ ಫೆ.18 ಮತ್ತು 19ರಂದು ನಡೆಯಲಿದೆ.

ಲೀಗ್ ಪಂದ್ಯಗಳು ಫೆಬ್ರವರಿ 18ರಂದು ದುಬೈ ಅಲ್‌ಐನ್ ರೋಡ್‌ನ ಸೆವೆನ್ಸ್ ಸ್ಟೇಡಿಯಂನಲ್ಲಿ ಹಾಗೂ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಾಟ ಶಾರ್ಜಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ.

ದುಬೈಯ ಇತಿಹಾಸದಲ್ಲಿಯೇ ಮೊತ್ತಮೊದಲ ಬಾರಿಗೆ ಹಾರ್ಡ್ ಟೆನ್ನಿಸ್‌ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಬೃಹತ್ ಮೊತ್ತದ ನಗದು ಬಹುಮಾನ ನೀಡಲಾಗುತ್ತಿದೆ. ವಿಜೇತ ತಂಡಕ್ಕೆ ಮೊದಲ ಬಹುಮಾನವಾಗಿ 60 ಸಾವಿರ ದಿರ್ಹಂ ಹಾಗೂ ರನ್ನರ್‌ಅಪ್ ತಂಡಕ್ಕೆ 30 ಸಾವಿರ ದಿರ್ಹಂ ನಗದು ಬಹುಮಾನ -ಟ್ರೋಫಿ ನೀಡಿ ಗೌರವಿಸಲಾಗುವುದು. ಜೊತೆಗೆ ಮ್ಯಾನ್‌ಅಪ್‌ದಿ ಸಿರೀಸ್, ಬೆಸ್ಟ್ ಬ್ಯಾಟ್ಸ್‌ಮೆನ್, ಬೆಸ್ಟ್ ಬೌಲರ್ ಪ್ರಶಸ್ತಿ ಕೂಡಾ ನೀಡಲಾಗುವುದು.

ಪಂದ್ಯಾಟದಲ್ಲಿ ದೋಹಾ-ಕತಾರ್‌ನ ಎರಡು ತಂಡ, ಸೌದಿ ಅರೇಬಿಯಾದ ಎರಡು ತಂಡ, ಮಸ್ಕತ್‌ನ ಒಂದು ತಂಡ, ಕುವೈಟ್‌ನ ಒಂದು ತಂಡ, ದುಬೈನ ಎಂಟು ತಂಡ ಹಾಗೂ ಭಾರತದ ಗೋವಾ ಹಾಗೂ ಕರ್ನಾಟಕದಿಂದ ಒಂದು ತಂಡ ಸೇರಿದಂತೆ ಒಟ್ಟು 16 ತಂಡಗಳು ಭಾಗವಹಿಸಲಿವೆ.

ಪಂದ್ಯಾಟದಲ್ಲಿ ದುಬೈಯ ಉದ್ಯಮಿ, ಫೋರ್ಚುನ್ ಗ್ರೂಪ್ ಆಫ್ ಹೊಟೇಲರ್ಸ್‌ನ ಮಾಲಕ ಪ್ರವೀಣ್ ಕುಮಾರ್ ಶೆಟ್ಟಿ ಅಭಿಮಾನಿ ಬಳಗದ ತಂಡ ಕೂಡಾ ಭಾಗವಹಿಸುತ್ತಿರುವುದು ವಿಶೇಷವಾಗಿದೆ.

Write A Comment