ಮನೋರಂಜನೆ

ಬೆಂಗಳೂರಿನಲ್ಲಿ ಐಪಿಎಲ್ ಒಂಬತ್ತನೇ ಆವೃತ್ತಿಗೆ ಹರಾಜು; ವಾಟ್ಸನ್‌ಗೆ ₹ 9.5 ಕೋಟಿ, ತಗ್ಗಿದ ಯುವಿ ‘ಬೆಲೆ’

Pinterest LinkedIn Tumblr

IPLLLL

ಬೆಂಗಳೂರು: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಒಂಬತ್ತನೇ ಆವೃತ್ತಿಗೆ ಹರಾಜು ನಡೆಯುತ್ತಿದ್ದು ಆಸ್ಟ್ರೇಲಿಯಾದ ಶೇನ್‌ ವಾಟ್ಸನ್‌ ಅವರನ್ನು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ₹ 9.5 ಕೋಟಿಗೆ ಖರೀದಿಸಿದೆ.

ಆದರೆ ಐಪಿಎಲ್‌ನಲ್ಲಿ ಸದಾ ಹೆಚ್ಚು ಹಣವನ್ನೇ ಪಡೆಯುತ್ತಾ ಬಂದಿದ್ದ ಯುವರಾಜ್‌ ಸಿಂಗ್‌ಗೆ ಈ ಬಾರಿ ಲಭಿಸಿದ್ದು ₹ 7 ಕೋಟಿ ಮಾತ್ರ. ಚುಟುಕು ಕ್ರಿಕೆಟ್‌ನ ಪರಿಣತ ಬ್ಯಾಟ್ಸ್‌ಮನ್‌ ಯುವರಾಜ್ ಅವರನ್ನು ಎರಡು ವರ್ಷಗಳ ಹಿಂದೆ ಆರ್‌ಸಿಬಿ ₹ 14 ಕೋಟಿ ನೀಡಿ ಖರೀದಿಸಿತ್ತು.

ಹೋದ ವರ್ಷ ಡೆಲ್ಲಿ ಡೇರ್‌ಡೆವಿಲ್ಸ್‌ ₹ 16 ಕೋಟಿ ಕೊಟ್ಟಿತ್ತು. ಆದ್ದರಿಂದ ಈ ಬಾರಿಯೂ ಯುವರಾಜ್‌ ಬೆಲೆ ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಅಚ್ಚರಿಯೆಂದರೆ ಯುವರಾಜ್‌ ಅವರನ್ನು ಖರೀದಿಸಲು ಯಾವ ಫ್ರಾಂಚೈಸ್‌ಗಳು ಆರಂಭದಲ್ಲಿ ಮುಂದಾಗಲಿಲ್ಲ. ಕೊಂಚ ಪೈಪೋಟಿಯ ಬಳಿಕ ಸನ್‌ರೈಸರ್ಸ್ ಖರೀದಿಸಿತು.

ಪ್ರಮುಖ ಆಟಗಾರರಾದ ಆಸ್ಟ್ರೇಲಿಯಾದ ಆ್ಯರನ್‌ ಫಿಂಚ್‌ ಮತ್ತು ಸ್ಪೋಟಕ ಬ್ಯಾಟ್ಸ್‌ಮನ್‌ ನ್ಯೂಜಿಲೆಂಡ್‌ನ ಮಾರ್ಟಿನ್ ಗುಪ್ಟಿಲ್‌ ಅವರನ್ನು ಖರೀದಿಸಲು ಯಾರೂ ಮುಂದಾಗಲಿಲ್ಲ!

ಕನ್ನಡಿಗ ಬಿನ್ನಿ ₹ 2 ಕೋಟಿ : ಹೋದ ವರ್ಷ ರಾಜಸ್ತಾನ ರಾಯಲ್ಸ್ ತಂಡದಲ್ಲಿದ್ದ ಕರ್ನಾಟಕದ ಸ್ಟುವರ್ಟ್‌ ಬಿನ್ನಿ ₹ 2ಕೋಟಿಗೆ ಆರ್‌ಸಿಬಿ ತಂಡದ ಪಾಲಾಗಿದ್ದಾರೆ. ಮೊದಲು ಬಿಡ್‌ ಮಾಡಿದ ಆರ್‌ಸಿಬಿ ರಾಜ್ಯದ ಆಟಗಾರನನ್ನು ತನ್ನತ್ತ ಸೆಳೆದುಕೊಂಡಿತು.

ಹರಾಜಾದ ಪ್ರಮುಖ ಆಟಗಾರರು:
ಆಶಿಶ್ ನೆಹ್ರಾ (₹ 5.5 ಕೋಟಿ; ಸನ್‌ರೈಸರ್ಸ್‌ ಹೈದರಾಬಾದ್‌)
ಕೆವಿನ್‌ ಪೀಟರ್ಸ್‌ನ್‌ (3.5 ಕೋಟಿ; ಪುಣೆ)
ಇಶಾಂತ್‌ ಶರ್ಮಾ (₹ 3.8 ಕೋಟಿ; ಪುಣೆ)
ಡ್ವೇನ್‌ ಸ್ಮಿತ್‌ (₹ 2.3 ಕೋಟಿ; ಗುಜರಾತ್‌ ಲಯನ್ಸ್‌)
ಡೇಲ್‌ ಸ್ಟೇಯ್ನ್‌ (₹ 2.3; ಗುಜರಾತ್‌ ಲಯನ್ಸ್‌).

Write A Comment