ಪಠಾಣ್‌ಕೋಟ್ (ಪಂಜಾಬ್),ಫೆ.2-ಪಠಾಣ್‌ಕೋಟ್ ಕಂಟೋನ್ಮೆಂಟಿನಲ್ಲಿ ವಾಸ್ತವ್ಯವಿದ್ದ ಉಗ್ರರಿಗೆ ಮಾಹಿತಿ ನೀಡುತ್ತಿದ್ದ ಐಎಸ್‌ಐ ಏಜೆಂಟ್ ಇರ್ಷಾದ್ ಹಾಗೂ ಕಾಶ್ಮೀರದಲಿದ್ದ ಇನ್ನೊಬ್ಬ ಐಎಸ್ ಏಜೆಂಟ್ ಸಜ್ಜಾದ್‌ಎಂಬ ಇಬ್ಬರು ಭಾರತೀಯ ರನ್ನು ಪೊಲೀಸರು ಬಂಧಿಸಿದ್ದಾರೆ. ಪಠಾಣ್‌ಕೋಟ್‌ನಲ್ಲಿರುವ ಮಮ್ಮೋನ್ ಕಂಟೋನ್ಮೆಂಟಿನಲ್ಲಿ ಕಾರ್ಮಿಕನಾಗಿದ್ದ ಇರ್ಷಾದ್ ಯಾರಿಗೂ ತಿಳಿಯದಂತೆ ಇಲ್ಲಿನ ವಾಯುನೆಲೆ ಶಸ್ತ್ರಾಗಾರ, ಸೇನಾನೆಲೆಗಳ ಸಮಗ್ರ ಮಾಹಿತಿಗಳನ್ನೂ ಚಿತ್ರಗಳನ್ನು ಪಾಕಿಸ್ಥಾನದ ಐಎಸ್‌ಐಗೆ ರವಾನಿಸುತ್ತಿದ್ದ. ಪೊಲೀಸರು ಈಗ ಅವನಿಂದ ಎಲ್ಲಾ ವಶಪಡಿಸಿಕೊಂಡಿದ್ದಾರೆ. ತನ್ನ ಬಳಿಯಿರುವ ಸ್ಮಾರ್ಟ್ ಪೋನ್ ಮೂಲಕ ವಿಚಾರ ವಿನಿಮಯ ನಡೆಯುತ್ತಿತ್ತು.
ಪಠಾಣ್‌ಕೋಟ್‌ನಲ್ಲಿ ಭಾರತೀಯ ಸೇನೆಯ ಅತ್ಯಂತ ಸೂಕ್ಷ್ಮವಾದ ಹಾಗೂ ದೊಡ್ಡ ಸೇನಾ ನೆಲೆಯಾಗಿದೆ.
ಇಲ್ಲಿ ಸೇನೆಯ ಇನ್‌ಫ್ಯಾಂಟ್ರಿ ಬೆಟಾಲಿಯನ್ ಮತ್ತು ಅಶ್ವಪಡೆಗಳ ನೆಲೆಯಿದೆ. ವಾಯುನೆಲೆಯೂ ಸೇರಿದಂತೆ ಎಲ್ಲಾ ಕುರಿತ ವಿವರ ಮಾಹಿತಿಗಳನ್ನು ಇರ್ಷಾದ್ ತನ್ನು ಸ್ಮಾರ್ಟ್ ಪೋನ್ ಮೂಲಕ ರವಾನಿಸುತ್ತಿದ್ದ.
ಈ ಕುರಿತಂತೆ ಗುಪ್ತಚರ ಇಲಾಖೆ ನೀಡಿದ ಸುಳಿವನ್ನಾಧರಿಸಿ ಪಂಜಾಬ್ ಪೊಲೀಸರು ಕಾರ್ಯಾಚರಣೆ ನಡೆಸಿ ಇರ್ಷಾದ್‌ನನ್ನು ಬಂಧಿಸಿದ್ದಾರೆ. ಜಮ್ಮುಕಾಶ್ಮೀರದಲ್ಲಿರುವ ಇನ್ನೊಬ್ಬ ಏಜೆಂಟ್ ಸಜ್ಜಾತ್ ಮೂಲಕ ಈ ಮಾಹಿತಿ ರವಾನೆಯಾಗುತ್ತಿತ್ತು. ಇರ್ಷಾದ್ ನೀಡಿದ ಮಾಹಿತಿ ಆಧರಿಸಿ ಸಜ್ಜಾದ್‌ನನ್ನು ಬಂಧಿಸಲಾಗಿದೆ. ಇವರಿಬ್ಬರೂ ಉಗ್ರರಿಗೆ ಅಗತ್ಯವಾದ ಎಲ್ಲಾ ವಿವರಗಳನ್ನೂ ಕಲೆಹಾಕಿ ಕಳುಹಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.