ರಾಷ್ಟ್ರೀಯ

ಹೆಣ್ಣು ಭ್ರೂಣ ಪತ್ತೆ ಕಾಯ್ದೆ ನಿಷೇಧ ತೆರವಿಗೆ ಮನೇಕಾ ಗಾಂಧಿ ಇಂಗಿತ

Pinterest LinkedIn Tumblr

menakaನವದೆಹಲಿ,ಫೆ.2-ಹೆಣ್ಣು ಶಿಶುಗಳ ಭ್ರೂಣ ಹತ್ಯೆಯನ್ನು ಪರಿಣಾಮಕಾರಿಯಾಗಿ ತಡೆಯಲು ನಿಷೇಧಿತ ಲಿಂಗಪತ್ತೆ ಕಾನೂನು ಅಗತ್ಯ ಎಂದು ಕೇಂದ್ರ ಸಚಿವೆ ಮನೇಕಾ ಗಾಂಧಿ ಹೇಳಿದ್ದಾರೆ.

ಕಳೆದ ಎರಡುದಶಕಗಳಿಂದ ದೇಶದಲ್ಲಿ ಲಿಂಗಪತ್ತೆ ಕಾಯ್ದೆಯನ್ನು ನಿಷೇಧಿಸಲಾಗಿದೆ. ಲಿಂಗಪತ್ತೆಯಿಂದ ಮಗುವನ್ನು ಹೆಣ್ಣು ಭ್ರೂಣ ಹತ್ಯೆ ನಡೆಯುತ್ತದೆ ಎಂಬ ಕಾರಣ್ಕಕೆ ಸರ್ಕಾರ ಈ ಕಾಯ್ದೆಯನ್ನು ನಿಷೇಧಿಸಿತ್ತು. ಆದರೆ, ಗರ್ಭಧರಿಸಿದ ಆರಂಭದಲ್ಲೇ ಭ್ರೂಣದ ಲಿಂಗ ಪತ್ತೆ ಮಾಡಿ ಅದನ್ನು ಒಮ್ಮೆ ದಾಖಲು ಮಾಡಿದರೆ ಭ್ರೂಣ ಮಗುವಾಗಿ ಜನಿಸಿತೇ ಅಥವಾ ಹತ್ಯೆಯಾಗಿ ಹೋಯಿತೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ಹಾಗಾದಾಗ ಹೆಣ್ಣು ಭ್ರೂಣ ಹತ್ಯೆ ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು ಎಂದು ಕೇದ್ರ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಮನೇಕಾ ಗಾಂಧಿ ಹೇಳಿದ್ದಾರೆ.

ಸದ್ಯಕ್ಕೆ ನಾನು ಈ ಯೋಜನೆಯನ್ನು ಪ್ರಸ್ತಾಪಿಸಿದ್ದೇನೆ. ಇನ್ನೂ ವ್ಯಾಪಕ ಚರ್ಚೆಗೊಳಪಟ್ಟು ಅಂತಿಮ ತೀರ್ಮಾನಕ್ಕೆ ಬರಬೇಕಾಗುತ್ತದೆ. ಹೆಣ್ಣು ಭ್ರೂಣ ಹತ್ಯೆ ವ್ಯಾಪಕವಾಗಿದ್ದು, ಈ ಸಮಸ್ಯೆ ಪರಿಹಾರಕ್ಕೆ ಇದೊಂದು ವಿಭಿನ್ನ ಮಾರ್ಗವಾಗಬಹುದು ಎಂದು ಅವರು ಹೇಳಿದ್ದಾರೆ.

ಹೆಣ್ಣುಭ್ರೂಣ ಹತ್ಯೆಯ ಮುಂಚೂಣಿ ರಾಷ್ಟ್ರಗಳಲ್ಲಿ ಭಾರತವೂ ಒಂದು. 2011ರ ಗಣತಿಯ ಪ್ರಕಾರ 1ಸಾವಿರ ಗಂಡು ಮಕ್ಕಳಿಗೆ ಹೆಣ್ಣುಮಕ್ಕಳ ಅನುಪಾತ ಕೇವಲ 914ಮಾತ್ರ. ಆದರೆ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ್ಯವಿಲ್ಲದ ಅನಕ್ಷರಸ್ಥ ವ್ಯವಸ್ಥೇಯಲ್ಲಿ ಭ್ರೂಣ ಲಿಂಗಪತ್ತೆ ಮಾರಕವಾಗುವುದೇ ಹೆಚ್ಚು ಎಂದು ಕೆಲ ಸಾಮಾಜಿಕ ಕಾರ್ಯಾಕರ್ತ್ರು ಅಭಿಪ್ರಾಯಪಟ್ಟಿದ್ದಾರೆ.

Write A Comment