ರಾಷ್ಟ್ರೀಯ

ರಾಜಕೀಯ ಬಿಕ್ಕಟ್ಟಿಗೆ ಪಿಡಿಪಿ ಮೊಂಡುತನ ಕಾರಣ: ಬಿಜೆಪಿ

Pinterest LinkedIn Tumblr

Flag_of_the_Bharatiya_Janata_Partyಜಮ್ಮು (ಪಿಟಿಐ): ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ಕಾರ ರಚನೆ ಕುರಿತ ಅನಿಶ್ವಿತತೆಗೆ ಪೀಪಲ್ಸ್ ಡೆಮಾಕ್ರಟಿಕ್ ಪಾ‌ರ್ಟಿ (ಪಿಡಿಪಿ) ಕಾರಣ ಎಂದು ಬಿಜೆಪಿ ಮಂಗಳವಾರ ಆರೋಪಿಸಿದೆ.

ಬಿಜೆಪಿಯು ‘ಮೈತ್ರಿಕೂಟದ ಕಾರ್ಯಸೂಚಿ’ಗೆ ಬದ್ಧವಾಗಿದೆ. ಆದರೆ, ಪಿಡಿಪಿಯು ‘ಮೊಂಡುತನ’ ತೋರುತ್ತಿದೆ ಎಂದು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಶೋಕ್ ಕೌಲ್ ಅವರು ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.

‘ಸರ್ಕಾರ ರಚನೆಗೆ ನಮ್ಮ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದೇವೆ. ಪಿಡಿಪಿ ಕೂಡ ಹಾಗೆಯೇ ಸ್ಪಂದಿಸುವ ವಿಶ್ವಾಸವಿದೆ. ಬಿಜೆಪಿಯಿಂದಾಗಿ ಅನಿಶ್ಚಿತತೆ ಎದುರಾಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಜನವರಿ 7ರಂದು ಮುಖ್ಯಮಂತ್ರಿಯಾಗಿದ್ದ ಮುಫ್ತಿ ಮೊಹಮ್ಮದ್ ಸಯೀದ್ ಅವರು ನಿಧನರಾಗಿದ್ದರು. ಇದರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದೆ. ಸದ್ಯ ಅಲ್ಲಿ ರಾಜ್ಯಪಾಲರ ಆಳ್ವಿಕೆಗೆ ಒಳಪಟ್ಟಿದೆ. ಕಣಿವೆ ರಾಜ್ಯವು ರಾಜ್ಯಪಾಲರ ಆಳ್ವಿಕೆಗೆ ಒಳಪಟ್ಟಿರುವುದು ಇದು ಏಳನೇ ಬಾರಿಗೆ.

87 ಸದಸ್ಯ ಬಲದ ವಿಧಾನಸಭೆಯಲ್ಲಿ ಪಿಡಿಪಿ 27 ಶಾಸಕರನ್ನು ಹೊಂದಿದೆ. ಬಿಜೆಪಿ 25 ಸ್ಥಾನಗಳನ್ನು ಹೊಂದಿದೆ. ಈ ಎರಡೂ ಪಕ್ಷಗಳು ಮೈತ್ರಿಕೂಟ ರಚಿಸಿಕೊಂಡು ಅಧಿಕಾರ ನಡೆಸುತ್ತಿದ್ದವು.

Write A Comment