ರಾಷ್ಟ್ರೀಯ

ಬಾಂಡ್‌ಗೆ ಕಥಾವಸ್ತುಗಳು ಹೊಳೆಯುವುದು ಹಾಸಿಗೆಯಲ್ಲಿ!

Pinterest LinkedIn Tumblr

Ruskin-Bondಕೋಲ್ಕತ್ತ (ಪಿಟಿಐ): ಖ್ಯಾತ ಬರಹಗಾರ ರಸ್ಕಿನ್ ಬಾಂಡ್ ಅವರಿಗೆ ಕಥಾವಸ್ತುಗಳು ಎಲ್ಲಿ ಸಿಗುತ್ತವೆ ಗೊತ್ತಾ? ಹಾಸಿಗೆ ಮೇಲಂತೆ. ಸ್ವತಃ ಬಾಂಡ್ ಅವರೇ ಇದನ್ನು ಹೇಳಿಕೊಂಡಿದ್ದಾರೆ.

‘ನನ್ನ ಅತ್ಯುತ್ತಮ ಕಲ್ಪನೆಗಳೆಲ್ಲವೂ ಹಾಸಿಗೆಯಲ್ಲಿಯೇ ಹೊಳೆದಿವೆ. ಹಾಸಿಗೆ ಮೇಲೆ ನಿದ್ರಿಸಲಿ ಇಲ್ಲವೇ ಎಚ್ಚರವೇ ಇರಲಿ ಕಲ್ಪನೆಗಳು ಹರಿದು ಬರುತ್ತವೆ. ಕಥೆಗಳು ಹೆಚ್ಚಾಗಿ ರೂಪುಗೊಂಡಿದ್ದು ಹಾಸಿಗೆ ಮೇಲೆ ಮಲಗಿ, ಎಚ್ಚರ ಇರುವಾಗಲೇ. ನಿದ್ರಿಸುವಾಗ, ಕನಸಿಗಳು ಕೂಡ ಕಥೆಯನ್ನು ರೂಪಿಸುತ್ತವೆ’ ಎಂದು ಬಾಂಡ್‌ ಹೇಳಿಕೊಂಡಿದ್ದಾರೆ.

ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಷಯ ತಿಳಿಸಿದ್ದಾರೆ.

ಅವರ ಇತ್ತೀಚಿನ ಪುಸ್ತಕ ‘ರಸ್ಟಿ ಅಂಡ್‌ ದ ಮ್ಯಾಜಿಕ್ ಮೌಂಟೇನ್‌’ರ ಕಥಾಹಂದರಕ್ಕೂ ಕನಸ್ಸೊಂದು ಕಾರಣವಂತೆ. ಬರೀ ಕನಸಲ್ಲ ದುಃಸ್ವಪ್ನವಂತೆ.

ಪುಸ್ತಕದ ಕುರಿತು ಒಂದಿಷ್ಟು ವಿಷಯಗಳನ್ನು ಹಂಚಿಕೊಂಡ ಬಾಂಡ್‌, ಸುತ್ತಲಿನ ಎಲ್ಲಾ ಬಾಗಿಲು ಹಾಗೂ ಕಿಟಕಿಗಳುನ್ನು ಮುಚ್ಚಿದರೂ ಹುಲಿ ಅಂತಿಮವಾಗಿ ಬಾಗಿಲು ಮುರಿದು ಒಳಗೆ ಬರುತ್ತದೆ ಎನ್ನುತ್ತಾರೆ.

‘ಇಂಥ ಸರಿಯಾದ ಸಮಯಕ್ಕೆ ನಾನು ಏಳುತ್ತೇನೆ’ ಎಂದು ಅವರು ತಮ್ಮ ಕಲ್ಪನೆಗಳನ್ನು ಬರಹಕ್ಕಿಳಿಸುವ ಬಗೆ ಹೇಳಿ ನಕ್ಕರು.

81 ವರ್ಷದ ಬಾಂಡ್‌ ಅವರ ಕಥೆಗಳು ಶಾಲಾ ಮಕ್ಕಳಿಗೆ ಪಠ್ಯವಾಗಿವೆ. ಅವರು ‘ರೂಮ್‌ ಆನ್‌ ದ ರೂಫ್‌‘’, ‘ದ ಬ್ಲ್ಯು ಅಂಬ್ರೇಲಾ’, ‘ಫನ್ನಿ ಸೈಡ್‌ ಅಪ್’, ‘ಅವರ್ ಟ್ರೀಸ್‌ ಸ್ಟಿಲ್‌ ಗ್ರೋ ಇನ್‌ ದೆಹ್ರಾ’ ಹಾಗೂ ‘ಅ ಫ್ಲೈಟ್‌ ಆಫ್‌ ಪಿಜನ್ಸ್‌‘ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ.

Write A Comment