ನವದೆಹಲಿ: ಬಾಂಬ್ ಬೆದರಿಕೆಯೊಂದನ್ನು ಅನುಸರಿಸಿ ಕಠ್ಮಂಡುವಿಗೆ ತೆರಳಬೇಕಾಗಿದ್ದ ಸ್ಪೈಸ್ ಜೆಟ್ ವಿಮಾನಯಾನವನ್ನು ಸೋಮವಾರ ಇಲ್ಲಿ ಸ್ಥಗಿತಗೊಳಿಸಿ, ಅದರೊಳಗಿದ್ದ ಪ್ರಯಾಣಿಕರನ್ನು ವಿಮಾನದಿಂದ ತೆರವುಗೊಳಿಸಲಾಗಿದೆ.
ವಿಮಾನವು ಮಧ್ಯಾಹ್ನ 1.25ಕ್ಕೆ ನವದೆಹಲಿಯಿಂದ ಕಠ್ಮಂಡುವಿಗೆ ಹೊರಡಬೇಕಾಗಿತ್ತು. ಅಷ್ಟರಲ್ಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಅಪರಿಚಿತ ದೂರವಾಣಿ ಕರೆಯೊಂದು ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂದು ತಿಳಿಸಿತು. ತತ್ ಕ್ಷಣವೇ ಎಲ್ಲಾ ಪ್ರಯಾಣಿಕರನ್ನೂ ಸುರಕ್ಷಿತವಾಗಿ ತೆರವುಗೊಳಿಸಲಾಯಿತು. ವಿಮಾನವನ್ನು ತೀವ್ರ ಶೋಧಕ್ಕೆ ಒಳಪಡಿಸಲಾಗಿದೆ ಎಂದು ದೆಹಲಿ ಪೊಲೀಸ್ ಡೆಪ್ಯುಟಿ ಕಮೀಷನರ ದಿನೇಶ್ ಕುಮಾರ್ ಹೇಳಿದರು.