ರಾಷ್ಟ್ರೀಯ

ಪತ್ರಕರ್ತೆಗೆ ಥಳಿತ: ಗುಜರಾತ್ ಗಲಭೆ ಅಪರಾಧಿ ಸುರೇಶ್ ಛಾರನ್ ಬಂಧನ

Pinterest LinkedIn Tumblr

Revatiಅಹ್ಮದಾಬಾದ್: 2002ರ ಗುಜರಾತ್ ಗಲಭೆ ಅಪರಾಧಿ ಸುರೇಶ್ ಛಾರನ್ ಸಂದರ್ಶನ ವೇಳೆ ಪತ್ರಕರ್ತೆ ರೇವತಿ ಲೌಲ್ ಅವರಿಗೆ ಥಳಿಸಿದ ಹಿನ್ನೆಲೆ ಸುರೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

ನರೋಡಾ ಪಾಟಿಯಾ ನರಮೇಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆಗೆ ಗುರಿಯಾಗಿದ್ದ ಸುರೇಶ್ ಪೆರೋಲ್ ಮೇಲೆ ಬಿಡುಗಡೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ರಾತ್ರಿ ಸುರೇಶ್ ಛಾರನ್ ಸಂದರ್ಶನ ನಡೆಸಿದ ರೇವತಿ ಲೌಲ್ ನರಮೇಧ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ. ಇದರಿಂದ ಕೆರಳಿದ ಸುರೇಶ್  ತನ್ನ ಕೆನ್ನೆಗೆ ಬಾರಿಸಿದುದಲ್ಲದೆ, ದೈಹಿಕ ಹಲ್ಲೆಯನ್ನು ನಡೆಸಿದ್ದಾಗಿ ಪತ್ರಕರ್ತೆ ಆಪಾದಿಸಿದ್ದಾರೆ.

ಸುರೇಶ್ ಯಾವುದೇ ಪ್ರಚೋದನೆಯಿಲ್ಲದೆಯೂ ನನ್ನ ಕೆನ್ನೆಗೆ ಭಾರಿಸಿ, ಹಲ್ಲೆ ನಡೆಸಿದರು. ಅವರು ನನ್ನ ತಲೆಯನ್ನು ಗೋಡೆಗೆ ಜಜ್ಜಿದರು” ಈ ವೇಳೆ ಅವರ ಮಗ ಹಾಗೂ ಸ್ಥಳೀಯರಿಂದಾಗಿ ನಾನು ಪಾರಾದೆ ಎಂದು ಲೌಲ್ ತಿಳಿಸಿದ್ದಾರೆ.

ಪತ್ರಕರ್ತೆ ರೇವತಿ ಲೌಲ್ ಕಳೆದ ಒಂದು ವರ್ಷದಿಂದ ಛಾರರ ಪತ್ನಿ ಮತ್ತು ಮಗನ ಸಂಪರ್ಕದಲ್ಲಿದ್ದರು. ತನ್ನ ಪುಸ್ತಕದ ಒಂದು ಭಾಗವಾಗಿ ಈ ಸಂದರ್ಶನವಿತ್ತು ಎಂದು ಹೇಳಲಾಗಿದೆ.

Write A Comment