ರಾಷ್ಟ್ರೀಯ

ಕೇರಳ: ಬೀಡಿ ಉದ್ಯಮಿ ಮೊಹಮ್ಮದ್ ನಿಶಾಂಗೆ ಜೀವಾವಧಿ ಶಿಕ್ಷೆ

Pinterest LinkedIn Tumblr

bidiತಿರುವನಂತಪುರ: ಭದ್ರತಾ ಗಾರ್ಡ್ ಚಂದ್ರ ಬೋಸ್ ಅವರನ್ನು ತನ್ನ ಐಷಾರಾಮಿ ಎಸ್​ಯುುವಿ ವಾಹನವನ್ನು ಗುದ್ದಿಸಿ ಕೊಂದ ಪ್ರಕರಣದಲ್ಲಿ ಕೇರಳದ ಖ್ಯಾತ ಬೀಡಿ ಉದ್ಯಮಿ ಮೊಹಮ್ಮದ್ ನಿಶಾಂಗೆ ಕೇರಳದ ನ್ಯಾಯಾಲಯವೊಂದು ಗುರುವಾರ ಜೀವಾವಧಿ ಸಜೆ ವಿಧಿಸಿತು.

ಕೊಲೆ ಸೇರಿದಂತೆ ಭಾರತೀಯ ದಂಡ ಸಂಹಿತೆಯ 9 ವಿಧಿಗಳ ಅಡಿಯಲ್ಲಿ ನಿಶಾಂ ಅಪರಾಧ ಎಸಗಿರುವುದು ಸಾಬೀತಾಗಿದೆ ಎಂದು ತ್ರಿಶ್ಯೂರ್ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ತೀರ್ಪು ನೀಡಿದೆ. ನಿಶಾಂಗೆ ಮರಣದಂಡನೆ ವಿಧಿಸಬೇಕು ಎಂದು ಪ್ರಾಸೆಕ್ಯೂಷನ್ ಆಗ್ರಹ ಪಡಿಸಿದ್ದರೂ, ನ್ಯಾಯಾಲಯವು ಜೀವಾವಧಿ ಸಜೆ ವಿಧಿಸಲು ನಿರ್ಧರಿಸಿತು. ಜೊತೆಗೇ 70 ಲಕ್ಷ ರೂಪಾಯಿಗಳ ದಂಡವನ್ನೂ ವಿಧಿಸಿತು. 50 ಲಕ್ಷ ರೂಪಾಯಿಗಳನ್ನು ಮೃತ ಚಂದ್ರಬೋಸ್ ಅವರ ಪತ್ನಿಗೆ ನೀಡಬೇಕು ಎಂದೂ ನ್ಯಾಯಾಲಯ ಆಜ್ಞಾಪಿಸಿತು.

ಜೀವಾವಧಿ ಸಜೆಯ ಪ್ರಕಾರ ಸಾಮಾನ್ಯವಾಗಿ 12 ವರ್ಷಗಳ ಸೆರೆವಾಸ ಅನುಭವಿಸಬೇಕಾಗಿದ್ದರೂ, ನಿಶಾಂ ವಿರುದ್ಧ ಹೊರಿಸಲಾಗಿದ್ದ ಅಪರಾಧಗಳ ವಿಧಿಗಳ ಅನ್ವಯ 24 ವರ್ಷಗಳ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ. ಆದ್ದರಿಂದ 39ರ ಹರೆಯದ ಉದ್ಯಮಿ ಮುಂದಿನ 36 ವರ್ಷಗಳನ್ನು ಸೆರೆಮನೆಯಲ್ಲೇ ಕಳೆಯಬೇಕಾಗುತ್ತದೆ ಎಂದು ಮೂಲಗಳು ಹೇಳಿವೆ. ತಪ್ಪು ಪ್ರಮಾಣಪತ್ರ ಸಲ್ಲಿಸಿ ನ್ಯಾಯಾಲಯವನ್ನು ದಾರಿ ತಪ್ಪಿಸಲು ಯತ್ನಿಸಿದ್ದಕ್ಕಾಗಿ ನಿಶಾಂ ಪತ್ನಿ ಅಮಲ್ ಅವಿರುದ್ಧ ಪ್ರಕರಣ ದಾಖಲಿಸುವಂತೆಯೂ ನ್ಯಾಯಾಲಯ ಪೊಲೀಸರಿಗೆ ನಿರ್ದೇಶನ ನೀಡಿದೆ. 2014ರ ಡಿಸೆಂಬರ್ 29ರಂದು ತನ್ನ ಹಮ್ಮರ್ ವಾಹನವನ್ನು 47ರ ಹರೆಯದ ಸೆಕುರಿಟಿ ಗಾರ್ಡ್ ಚಂದ್ರ ಬೋಸ್​ಗೆ ಗುದ್ದಿಸಿದ್ದಲ್ಲದೆ, ಬೋಸ್​ನ್ನು ಥಳಿಸಿದ್ದ ಎಂದು ಪ್ರಾಸೆಕ್ಯೂಷನ್ ಆಪಾದಿಸಿತ್ತು.

Write A Comment