ರಾಷ್ಟ್ರೀಯ

ರೋಹಿತ್ ಪ್ರಕರಣ: 14 ದಲಿತ ಪ್ರಾಧ್ಯಾಪಕರಿಂದ ಆಡಳಿತಾತ್ಮಕ ಹುದ್ದೆಗೆ ರಾಜಿನಾಮೆ

Pinterest LinkedIn Tumblr

rohit-22ಹೈದರಾಬಾದ್: ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ಸಂಶೊಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡಿರುವ ವಿವಿಯ 14 ದಲಿತ ಪ್ರಾಧ್ಯಪಕರು, ತಮ್ಮ ಆಡಳಿತಾತ್ಮಕ ಹುದ್ದೆಗಳಿಗೆ ರಾಜಿನಾಮೆ ನೀಡಿದ್ದು, ಇನ್ನೂ ಹಲವು ಪ್ರಾಧ್ಯಾಪಕರು ರಾಜಿನಾಮೆ ನೀಡುವ ಸಾಧ್ಯತೆ ಇದೆ.

ಪರೀಕ್ಷಾ ನಿಯಂತ್ರಕ, ಡೀನ್ ಹಾಗೂ ವಾರ್ಡನ್ ಹುದ್ದೆ ಸೇರಿದಂತೆ ಹಲವು ಆಡಳಿತಾತ್ಮಕ ಹುದ್ದೆಗಳಿಗೆ ಪ್ರಾಧ್ಯಾಪಕರು ರಾಜಿನಾಮೆ ನೀಡಿದ್ದಾರೆ. ಅಲ್ಲದೆ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ ಸಮಿತಿಯ ಮುಖ್ಯಸ್ಥರು ದಲಿತರೇ ಆಗಿದ್ದರು ಎಂಬ ಕೇಂದ್ರ ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಹೇಳಿಕೆಯನ್ನು ಖಂಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿರುವ ಪ್ರೊಫೆಸರ್ ವಿ.ಕೃಷ್ಣ ಅವರು, ನಾವು ವಿದ್ಯಾರ್ಥಿಗಳೊಂದಿಗೆ ಇದ್ದು, ಇದು ನಮ್ಮ ಒಮ್ಮತದ ನಿರ್ಧಾರ ಎಂದಿದ್ದಾರೆ. ಅಲ್ಲದೆ ಈಗಾಗಲೇ 10ರಿಂದ 15 ಪ್ರಾಧ್ಯಾಪಕರು ರಾಜಿನಾಮೆ ನೀಡಿದ್ದು, ಇನ್ನು ಹಲವರು ರಾಜಿನಾಮೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.

ರೋಹಿತ್ ಆತ್ಮಹತ್ಯೆ ಹಿನ್ನೆಲೆಯಲ್ಲಿ ದೇಶಾದ್ಯಂತ ಪ್ರತಿಭಟನೆಗಳು ಹೆಚ್ಚುತ್ತಿದ್ದು, ಇದೀಗ ಪ್ರೊಫೆಸರ್​ಗಳು ಸಹ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ವೇಮುಲ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಮತಿ ಇರಾನಿ ಅವರು “ಸೃಷ್ಟಿ ಸಿರುವ ಹೇಳಿಕೆ’ಯನ್ನು ವಿರೋಧಿಸಿ ಈ ಪ್ರೊಫೆಸರ್‌ಗಳು ರಾಜಿನಾಮೆ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ.

ರೋಹಿತ್​ನನ್ನು ಅಮಾನತು ಮಾಡಿದ ಸಮಿತಿಯಲ್ಲಿ ದಲಿತ ಪ್ರೊಫೆಸರ್ ಸಹ ಇದ್ದರು ಎಂಬ ಸಚಿವರ ಹೇಳಿಕೆಯನ್ನು ವಿಶ್ವವಿದ್ಯಾಲಯದ ಎಸ್​ಸಿ/ಎಸ್​ಸಿ ಟೀಚರ್ಸ್ ಮತ್ತು ಆಫೀಸರ್ಸ್ ಫೋರಮ್ ನಿರಾಕರಿಸಿದೆ. ಮೇಲ್ವರ್ಗದ ಪ್ರೊಫೆಸರ್ ಒಬ್ಬರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿಯಲ್ಲಿ ದಲಿತರು ಯಾರೂ ಇರಲಿಲ್ಲ ಎಂದು ತಿಳಿಸಿದೆ.

Write A Comment