ರಾಷ್ಟ್ರೀಯ

ಮಾನನಷ್ಟ ಖಟ್ಲೆ, ಕೋರ್ಟಿಗೆ ಹಾಜರಾದ ಕರುಣಾನಿಧಿ

Pinterest LinkedIn Tumblr

1-Karunanidi-WEBಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ (67) ಅವರು ತಮ್ಮ ದೀರ್ಘಕಾಲದ ಎದುರಾಳಿ ವಿರುದ್ಧ ಹೂಡಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಡಿಎಂಕೆ ಮುಖ್ಯಸ್ಥ ಎಂ. ಕರುಣಾನಿಧಿ (92) ಅವರು ಸೋಮವಾರ ಇಲ್ಲಿನ ನ್ಯಾಯಾಲಯವೊಂದಕ್ಕೆ ಹಾಜರಾಗಿದ್ದು, ಪ್ರಕರಣದ ವಿಚಾರಣೆಯನ್ನು ಮಾರ್ಚ್ 10ಕ್ಕೆ ಮುಂದೂಡಲಾಯಿತು.

ಪುತ್ರಿ ಕನಿಮೊಳಿ, ಕಿರಿಯ ಪುತ್ರ ಎಂ.ಕೆ. ಸ್ಟಾಲಿನ್ ಮತ್ತು ನೂರಾರು ಬೆಂಬಲಿಗರ ಜೊತೆಗೆ ಕರುಣಾನಿಧಿ ನ್ಯಾಯಾಲಯಕ್ಕೆ ಆಗಮಿಸಿದರು. ಪ್ರಕರಣ ಆರಂಭಗೊಂಡ ಕೆಲವೇ ಕ್ಷಣಗಳಲ್ಲಿ ಪ್ರಕರಣವನ್ನು ಮಾರ್ಚ್ 10ಕ್ಕೆ ಮುಂದೂಡಲಾಯಿತು. ತಮ್ಮ ವರ್ಚಸ್ಸಿಗೆ ಕುಂದು ಉಂಟಾಗುವಂತಹ ಲೇಖನವನ್ನು ಕರುಣಾನಿಧಿ ಅವರ ಪಕ್ಷದ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ ಎಂದು ಆಪಾದಿಸಿ ಜಯಲಲಿತಾ ಅವರು ಕಳೆದ ವರ್ಷ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಆಳುವ ಎಐಎಡಿಎಂಕೆಯನ್ನು ಬೆಂಬಲಿಸದ ಪ್ರಕಟಣೆಗಳನ್ನು ಬೆದರಿಸುವ ಯತ್ನವಾಗಿ ದಾಖಲಿಸಲಾಗಿರುವ ಪ್ರಕರಣ ಇದು ಎಂದು ಕರುಣಾನಿಧಿ ಹೇಳಿದ್ದಾರೆ.

Write A Comment